ಪಾಸ್ಪೋರ್ಟ್ ಮೇಲೆ ಮಗ ಚಿತ್ರ ಬರೆದ!
ಅವನು ನತದೃಷ್ಟ ಚೀನೀ ಮನುಷ್ಯ. ಮಗನೊಂದಿಗೆ ಟೂರಿಗೆಂದು ದಕ್ಷಿಣಾ ಕೊರಿಯಾಕ್ಕೆ ಹೋಗಿದ್ದ. ಜಾಲಿಟ್ರಿಪ್ಪಿಗೆಂದು 15 ದಿನಕ್ಕೆ ಹೋಗಿದ್ದವ ಇನ್ನೂ ಅಲ್ಲೇ ಇದ್ದಾನೆ. ಹಾಗೆ ಇರುತ್ತ ಎರಡು ತಿಂಗಳಾಗಿದೆ. ಆದರೆ, ಆತ ಜಾಲಿ ಆಗಿಲ್ಲ! ಕಸ್ಟಮ್ ಅಧಿಕಾರಿಗಳ ಕೈಯಲ್ಲಿ ಅವನು- ಮಗ ಇಬ್ಬರೂ ಬಂಧಿ. ಅಷ್ಟಕ್ಕೂ ಆತನೇನು ಅಕ್ಷಮ್ಯ ಅಪರಾಧ ಎಸಗಿಲ್ಲ. ದುರಂತ ನೋಡಿ, ಆತನ ಪಾಸ್ಪೋರ್ಟಿನ ಮೇಲೆ ಮಗ ಯದ್ವಾತದ್ವಾ ಡೂಡಲ್ಸ್ (ರೇಖಾಚಿತ್ರ) ಬಿಡಿಸಿ ಅಪ್ಪನನ್ನು ಇಂಥ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ. ಆ ಚಿತ್ರದಲ್ಲಿ ಪ್ರಾಣಿಗಳಿವೆ, ಮೋಡಗಳಿವೆ, ಗಿಡಗಳಿವೆ. ಮಗನ ಈ ಪರಮಾದ್ಭುತ ಕಲೆಯನ್ನು ಹೊಗಳಿದ ಕಸ್ಟಮ್ ಅಧಿಕಾರಿ, ಆತನಿಗೊಂದು ಡ್ರಾಯಿಂಗ್ ಬುಕ್ಕನ್ನು ಗಿಫ್ಟಾಗಿ ಕೊಟ್ಟಿದ್ದಾನಂತೆ. ಆದರೆ, ಅಪ್ಪನಿಗೆ ಬದಲಿ ಪಾಸ್ಪೋರ್ಟ್ ತೋರಿಸದೆ ಬಿಡುವುದಿಲ್ಲವೆಂದು ಗುಟುರು ಹಾಕಿದ್ದಾನೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

