ಪ್ರಾಣಿಗಳಿಗೂ ತಟ್ಟಿತು ವಿಭಜನೆ ಬಿಸಿ!
ಹೈದರಾಬಾದ್: ರಾಜ್ಯದ ವಿಭಜನೆ ಆಯ್ತು, ಈಗ ಪ್ರಾಣಿಗಳ ವಿಭಜನೆ!
ಆಂಧ್ರದ ನಲ್ಲಮಲ ರಕ್ಷಿತಾರಣ್ಯದಲ್ಲಿ ಹಾಯಾಗಿ ಓಡಾಡಿಕೊಂಡಿರುವ ಪ್ರಾಣಿಗಳಿಗೂ ಈಗ ವಿಭಜನೆಯ ಬಿಸಿ ತಾಕಿದೆ. ತೆಲಂಗಾಣ ಹಾಗೂ ಸೀಮಾಂಧ್ರ ರಾಜ್ಯಗಳು ಈ ಪ್ರಾಣಿಗಳನ್ನು ಹಂಚಿಕೊಳ್ಳಲು ನಿರ್ಧರಿಸಿವೆ. 9 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ರಕ್ಷಿತಾರಣ್ಯದ ಶೇ.60 ಭಾಗ ಆಂಧ್ರದಲ್ಲಿದ್ದು, ಉಳಿದ ಭಾಗ ತೆಲಂಗಾಣದಲ್ಲಿದೆ. ಹಾಗಾಗಿ ಈಗ ಕೆಲವು ಪ್ರಾಣಿಗಳು ಆಂಧ್ರಕ್ಕೂ, ಕೆಲವು ತೆಲಂಗಾಣಕ್ಕೂ ಸೀಮಿತವಾಗಿರಲಿದೆ. ಉಳಿದ ಸಣ್ಣಪುಟ್ಟ ಪ್ರಾಣಿಗಳನ್ನು ಇನ್ನಷ್ಟೇ ಹಂಚಿಕೆ ಮಾಡಬೇಕು ಎಂದು ಹೈದರಾಬಾದ್ನ ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಆದರೆ, ವನ್ಯಜೀವಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ಗಡಿ ದಾಟುವುದನ್ನು ತಪ್ಪಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ನಮ್ಗೆ ಮೊಸಳೆ ಸಿಕ್ಕಿಲ್ಲ!
ಇದೇ ವೇಳೆ, ಪ್ರಾಣಿಗಳ ಹಂಚಿಕೆಗೆ ಸಂಬಂಧಿಸಿ ಆರೋಪ, ಪ್ರತ್ಯಾರೋಪಗಳೂ ಕೇಳಿಬರಲು ಆರಂಭಿಸಿವೆ. ನಮ್ಗೆ ಒಂದೇ ಒಂದು ಮೊಸಳೆ ಸಿಕ್ಕಿಲ್ಲ ಎಂದು ತೆಲಂಗಾಣ ಆರೋಪಿಸಿದೆ. ಎತ್ತಿಪೋತುಲ ಜಲಪಾತದ ಕೆಳಗಿರುವ ಎಲ್ಲ 125 ಮೊಸಳೆಗಳೂ ಆಂಧ್ರಕ್ಕೇ ಸೇರುತ್ತವೆ ಎನ್ನುವುದು ತೆಲಂಗಾಣದ ಅಳಲು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಅರಣ್ಯ ಸಚಿವ ಜೋಗು ರಾಮಣ್ಣ, 'ನಮಗೇನೂ ಚಿಂತೆ ಇಲ್ಲ. ಅದಿಲಾಬಾದ್ನ ಕಂಟಕ ಜಲಪಾತದಲ್ಲಿ ಮೊಸಳೆಗಳಿವೆ. ಅವು ನಮಗೆ ಸಾಕು' ಎಂದಿದ್ದಾರೆ.
ಇನ್ನೂ ತಿಂಗಳುಗಳೇ ಬೇಕು
ಎರಡೂ ರಾಜ್ಯಗಳ ಅರಣ್ಯಾಧಿಕಾರಿಗಳು ಪ್ರಾಣಿಗಳ ವಿಭಜನೆ ಕಾರ್ಯದಲ್ಲಿ ತೊಡಗಿದ್ದಾರೆ. ನಲ್ಗೊಂಡಾ, ಮೆಹಬೂಬ್ನಗರ, ಕರ್ನೂಲ್, ಪ್ರಕಾಶಂ ಮತ್ತು ಗಂಟೂರಿನಾದ್ಯಂತ ಅರಣ್ಯಗಳಲ್ಲಿ ಭಾರಿ ಸಂಖ್ಯೆಯ ಪ್ರಾಣಿಗಳಿವೆ. ಅವೆಲ್ಲವನ್ನೂ ವಿಭಜಿಸುವುದು ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆ ಮುಗಿಯಲು ಇನ್ನೂ ಕೆಲ ತಿಂಗಳುಗಳೇ ಬೇಕು ಎನ್ನುತ್ತಾರೆ ಅಧಿಕಾರಿಗಳು.
ಯಾರ್ಯಾರಿಗೆ ಎಷ್ಟೆಷ್ಟು?
ತೆಲಂಗಾಣ
ಹುಲಿ 32
ಚಿರತೆ 75
ಕರಡಿ 200
ಕತ್ತೆಕಿರುಬ 300
ನರಿ 500
ಸೀಮಾಂಧ್ರ
40
125
250
400
600
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

