ಎಡಿಜಿಪಿ ರವೀಂದ್ರನಾಥ್ ತಪ್ಪಿತಸ್ಥ

ಬೆಂಗಳೂರು: ಕನ್ನಿಂಗ್ಹ್ಯಾಮ್ ರಸ್ತೆ ಕಾಫೀಶಾಪ್ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಪ್ರಕರಣ ಸಂಬಂಧ ಕೆಎಸ್ಆರ್ಪಿ ಎಡಿಜಿಪಿಯಾಗಿದ್ದ ಡಾ.ರವೀಂದ್ರನಾಥ್ ತಪ್ಪಿತಸ್ಥರೆಂದು ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಜತೆ ಅಗೌರವದಿಂದ ನಡೆದುಕೊಂಡ ಹೈಗ್ರೌಂಡ್ಸ್ ಸಬ್ ಇನ್ಸ್ಪೆಕ್ಟರ್ ರವಿ ಅವರನ್ನು ಅಮಾನತು ಮಾಡಿ ಇಲಾಖೆ ತನಿಖೆಗೆ ಮಂಗಳವಾರ ಶಿಫಾರಸು ಮಾಡಲಾಗಿದೆ.
ವರದಿ ಪ್ರತಿಯನ್ನು ಚಾರ್ಜ್ಶೀಟ್ ರೂಪದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಲಾಗಿದೆ. ಫೋಟೋ ರವೀಂದ್ರನಾಥ್ ಫೋನ್ನಿಂದಲೇ ಕ್ಲಿಕ್ಕಿಸಲಾಗಿದೆ ಎಂದು ಅಹ್ಮದಾಬಾದ್ನ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಹೇಳಿದೆ. ಹೀಗಾಗಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 509 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಸಿಐಡಿ ಅಧಿಕಾರಿಗಳು ಯುವತಿಯರ, ಸಾಕ್ಷಿದಾರರ ಹೇಳಿಕೆಗಳನ್ನು ಪಡೆದಿದ್ದು ಕಾಫೀ ಶಾಪ್ಗೆ ಭೇಟಿ ನೀಡಿ ತನಿಖೆ ಪೂರ್ಣಗೊಳಿಸಿದ್ದಾರೆ. ವರದಿ ಸಲ್ಲಿಸಿರುವುದನ್ನು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ರವೀಂದ್ರನಾಥ್ ಅವರನ್ನು ಸರ್ಕಾರ ಧಾರವಾಡ ಪೊಲೀಸ್ ಸಂಶೋಧನೆ ಘಟಕಕ್ಕೆ ಈಗಾಗಲೇ ವರ್ಗಾಯಿಸಿದೆ.
ಕಲಂ 509 ಏನನ್ನುತ್ತೆ?
ಮಹಿಳೆಯತ್ತ ಸನ್ನೆ, ಮಹಿಳೆ ಗೌರವಕ್ಕೆ ಧಕ್ಕೆ ತರುವ ಪದಗಳ ಬಳಕೆ, ಸದ್ದು ಮಾಡುವುದು, ವಸ್ತುಗಳ ಪ್ರದರ್ಶನ, ಈ ಮೂಲಕ ಮಹಿಳೆಯ ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧ. ಆರೋಪ ಸಾಬೀತಾದರೆ 1 ವರ್ಷದವರೆಗೆ ಸಾದಾ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


