ಕೊಳವೆ ಬಾವಿ ಮುಚ್ಚಲು ಜು.15 ಗಡುವು

Published On :
ಮೈಸೂರು: ಬಿಜಾಪುರದ ದ್ಯಾಬೇರಿಯಲ್ಲಿ ಅಕ್ಷತಾ ಎಂಬ ನಾಲ್ಕು ವರ್ಷದ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದು ಸಾವಿಗೀಡಾದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇಂಥ ಅನುಪಯುಕ್ತ ಕೊಳವೆ ಬಾವಿಗಳನ್ನು ಜು.15ರೊಳಗೆ ಮುಚ್ಚುವಂತೆ ಆದೇಶಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ಈ ಸಂಬಂಧ ರಾಜ್ಯದ ಎಲ್ಲ ಜಿಪಂ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್, 8 ಮಂದಿ ಅಧೀಕ್ಷಕ ಎಂಜಿನಿಯರ್‌ಗಳು, 38 ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅನುಪಯುಕ್ತ, ವಿಫಲವಾದ ಮತ್ತು ತೆರೆದ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದು ಅವಘಡಗಳು ಸಂಭವಿಸದಂತೆ ಸೂಕ್ತ ಕ್ರಮ ಜರುಗಿಸುವಂತೆ ಹಲವು ಬಾರಿ ಸುತ್ತೋಲೆ, ಮಾರ್ಗದರ್ಶಿ ಸೂಚನೆಗಳನ್ನು ಕಳುಹಿಸಲಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮಗೊಳ್ಳದಿರುವುದರಿಂದ ಮಕ್ಕಳು ಇಂಥ ಬಾವಿಗಳಿಗೆ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಎಚ್ಚರಿಕೆ: ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ಆಗುವ ಸಾವು-ನೋವುಗಳಿಗೆ ಕೊಳವೆ ಬಾವಿ ಮಾಲೀಕರು, ಕೊಳವೆ ಬಾವಿ ತೆಗೆದಿರುವ ಸಂಸ್ಥೆ, ಸಂಬಂಧಿಸಿದ ಜಿಲ್ಲಾ ಹಾಗೂ ಗ್ರಾಪಂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಸರ್ಕಾರ ಹಾಗೂ ಪಂಚಾಯ್ತಿಗಳಿಂದ ಕೊರೆಸಲಾದ ಕೊಳವೆ ಬಾವಿಗಳ ಬಗ್ಗೆ ಗ್ರಾಪಂ ಪಿಡಿಒಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳು ಜು.15ರೊಳಗೆ ಮುಚ್ಚಿಸಬೇಕು ಹಾಗೂ ಆಯಾ ಜಿಪಂ ಸಿಇಒಗಳು ಈ ಬಗ್ಗೆ ಜು.15 ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಮುಂದೆ ಅವಘಡ ಸಂಭವಿಸಿದಲ್ಲಿ ಪಿಡಿಒ ಹಾಗೂ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಹೊಣೆ ಮಾಡಲಾಗುವುದು. ಈ ಸಂಬಂಧ ಜಲಸಂಪನ್ಮೂಲ ಇಲಾಖೆ ಹೊರಡಿಸಿರುವ ಆದೇಶದ ಸೂಚನೆಗಳು, ಸುಪ್ರೀಂಕೋರ್ಟ್ ತೀರ್ಪಿನನ್ವಯ ಸರ್ಕಾರ ನೀಡಿರುವ 13 ಅಂಶಗಳನ್ನು ಪಾಲಿಸಬೇಕು. ಇವೆರಡೂ ಪಾಲನೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳು ಕೂಡಲೇ ಸಮೀಕ್ಷೆ ನಡೆಸಬೇಕು. ಜಿಲ್ಲೆಯ ವರದಿಯನ್ನು ಜೂ.30ರೊಳಗೆ ಸಲ್ಲಿಸಬೇಕು.
- ಅಕ್ಷತಾ ಪ್ರಕರಣದಿಂದ ಎಚ್ಚೆತ್ತ ಸರ್ಕಾರ
- ಅನುಪಯುಕ್ತ ಕೊಳವೆ ಬಾವಿಗಳ ಬಗ್ಗೆ 30ರೊಳಗೆ ಮಾಹಿತಿ ಸಲ್ಲಿಸಬೇಕು
- ಮತ್ತೆ ಸಾವು ಸಂಭವಿಸಿದರೆ ಅಧಿಕಾರಿಗಳು, ಕೊಳವೆಬಾವಿ ಮಾಲೀಕರೇ ಹೊಣೆ- ಸೂಚನೆ
- ಗೋಡೆ ಬರಹದ ಮೂಲಕ ಅರಿವು ಮೂಡಿಸುವ ಯತ್ನ
-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.