ಪ್ರಧಾನ ಸುದ್ದಿ

ರೋಪ್ ವೇ ಇದ್ದರೆ 'ಏಕಶಿಲಾ' ರೂಪಸಿ!

Published On :

ವೈ.ಸೋಮಶೇಖರ್
ಮಧುಗಿರಿ: ವಿಶ್ವ ಪ್ರಸಿದ್ಧ 2ನೇ ಏಕಶಿಲಾ ಬೆಟ್ಟ ಪ್ರವಾಸಿಗರ ಆಕರ್ಷಣೆಯ ತಾಣ. ಮಧುಗಿರಿ ಬೆಟ್ಟದ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನದ ರೋಪ್ ವೇ ನಿರ್ಮಿಸುವ ಅಗತ್ಯ ರಾಜಕೀಯ ಇಚ್ಛಾಶಕ್ತಿ ಬೇಕು ಎಂಬುದು ಪ್ರವಾಸಿಗರ ಅಭಿಮತ.
ಪ್ರತಿ ನಿತ್ಯ ಬಂದು ಹೋಗುವ  ಪ್ರವಾಸಿಗರು ಇಲ್ಲಿನ ಬೆಟ್ಟದ ಪೂರ್ಣ ಪರಿಚಯವೇ ಇಲ್ಲದಿರುವ ಕಾರಣ ಎಡರು-ತೊಡರು ಉಂಟಾಗುತ್ತಿವೆ. ಈಗಾಗಲೇ ಪ್ರವಾಸೋದ್ಯಮವಾಗಿ ಈ ಬೆಟ್ಟ ಗುರುತಿಸಿಕೊಂಡಿದೆ. ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸಿಗರ ಹಿತರಕ್ಷಣೆ ಕಾಪಾಡಲು ಮುಂದಾಗಬೇಕು.
ಬೆಟ್ಟದ ಬುಡದಿಂದ ತುದಿವಗೆರೆ ಬೆಟ್ಟ ಹತ್ತುವ ಬದಲಾಗಿ ಆಧುನಿಕ ತಂತ್ರಜ್ಞಾನ ಬಳಸಿ ರೋಪ್ ವೇ ನಿರ್ಮಿಸಬೇಕಿದೆ. ಇದರಿಂದ ಪ್ರವಾಸಿಗರು ಯಾವುದೇ ತುದಿಯ ತಾಣಗಳಲ್ಲಿ ನಿಂತು ವೀಕ್ಷಿಸಲು ಅನುವು ಮಾಡಿ ಕೊಡಬೇಕು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಮಂತ್ರಿ ಆಗಿದ್ದ ಜನಾರ್ದನ ರೆಡ್ಡಿ ರೋಪ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಂಕುಸ್ಥಾಪನೆ ಮಾಡಿದ್ದರು. ಆದರೆ, ಅದು ಇನ್ನು ಜಾರಿಯಾಗಿಲ್ಲ.
ಇತ್ತೀಚೆಗೆ ಬೆಂಗಳೂರಿನ ಎಚ್‌ಎಎಲ್ ಉದ್ಯೋಗಿ ಪ್ರಿಯಾಂಕ್ ಶರ್ಮಾ ಮತ್ತು ಗೌರವ್ ಆರೋಡ್ ಅವರು ಮಧ್ಯಾಹ್ನದ ವೇಳೆ ಬೆಟ್ಟ ಹತ್ತುವ ಪ್ರಯತ್ನ ಮಾಡಿದ್ದರು. ಇದರಲ್ಲಿ ಪ್ರಿಯಾಂಕ್ ಶರ್ಮಾ ಬೆಟ್ಟ ಹತ್ತಲಾಗದೇ ವಾಪಸ್ ಮರಳಿದ್ದ. ನಂತರ ಗೌರವ್ ಬೆಟ್ಟ ಹತ್ತಿ ಎಲ್ಲ ವೀಕ್ಷಿಸಿ ಇಳಿಯುವ ವೇಳೆಗೆ ಸಂಜೆ ಆದ ಕಾರಣ ದಾರಿ ತಪ್ಪಿದ್ದ. ಗೌರವ್ ಬೆಟ್ಟದ ಮೇಲಿಂದ ಸುಮಾರು 50 ಅಡಿ ಆಳದ ಪೊದೆಯೊಳಗೆ ಬಿದ್ದು ತೀವ್ರ ಗಾಯಳಾಗಿ ಆತಂಕದಲ್ಲಿ ಸಿಲುಕಿ ನರಳುತ್ತಿದ್ದ. ವಿಷಯ ತಿಳಿದ ಪೋಲಿಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಧುಗಿರಿ ಸಹೃದಯ ಯುವಶಕ್ತಿ ತಮ್ಮ ಜೀವದ ಹಂಗು ತೊರೆದು ಬೆಟ್ಟ ಹತ್ತಿ ಅಂದು ರಾತ್ರಿ 2 ಗಂಟೆವರೆಗೆ ಕಾರ್ಯಾಚರಣೆ ನಡೆಸಿದರು. ಬಳಿಕ ಸಿದ್ದರಕಟ್ಟೆ ಸಮೀಪ ಬಿದ್ದಿದ್ದ ಗೌರವ್‌ನನ್ನು ರಕ್ಷಿಸಲಾಗಿತ್ತು. ಇಂಥ ದುರ್ಘಟನೆಗಳು ಮತ್ತೆ ಮರುಕಳಸದಂತೆ ಎಚ್ಚವಹಿಸುವುದು ಸರ್ಕಾರದ ಅಗತ್ಯ ಕರ್ತವ್ಯವಾಗಿದೆ.
ಕೇಂದ್ರ ಪುರಾತತ್ವ, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರ ಇತ್ತ ಗಮನ ಹರಿಸಿ ಬೆಟ್ಟ ಹತ್ತಿ ಇಳುಯುವ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಸಿಸಿ ಕೊಡಬೇಕು ಎಂಬುದು ಸಾರ್ವಜನಿಕರು ಮತ್ತು ಪ್ರವಾಸಿಗರ ಅಭಿಮತ. ಅಲ್ಲದೆ, ಬೆಟ್ಟದ ಭದ್ರತೆಗೆ ಕಾವಲುಗಾರರನ್ನು ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.