ಪ್ರಧಾನ ಸುದ್ದಿ

ಮಳೆಗಾಗಿ ಜು.7ರಂದು ತಲಕಾವೇರಿಯಲ್ಲಿ ಯಜ್ಞ

Published On :

ಕುಶಾಲನಗರ: ಜೀವನದಿ ಕಾವೇರಿ ಸೇರಿದಂತೆ ದಕ್ಷಿಣ ಭಾರತದ ನದಿ ವ್ಯಾಪ್ತಿಗಳಲ್ಲಿ ವರುಣನ ಕೃಪೆಗಾಗಿ ಅಖಿಲ ಭಾರತೀಯ ಸನ್ಯಾಸಿಗಳ ಸಂಘ ಆಶ್ರಯದಲ್ಲಿ ಪರ್ಜನ್ಯ ಜಪ ಮೂಲಕ ಪ್ರಾರ್ಥನೆ ಸಲ್ಲಿಸಲು ಜು.7ರಂದು ತಲಕಾವೇರಿಯಲ್ಲಿ ಯಜ್ಞ ಕಾರ್ಯ ಕೈಗೊಳ್ಳಲಾಗುವುದು ಎಂದು ಶ್ರೀರಂಗಪಟ್ಟಣದ ಗಂಜಾಂ ಆದಿಶಂಕರ ಮಠದ ಸ್ವಾಮಿ ಗಣೇಶ ಸ್ವರೂಪನಂದಗಿರಿ ತಿಳಿಸಿದ್ದಾರೆ.ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸಾಧು ಸಂತರು ಮಳೆಗಾಗಿ ಯಜ್ಞ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಖ್ಯಾತ ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಜು.7ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12ರತನಕ ತಲಕಾವೇರಿಯಲ್ಲಿ ಯಜ್ಞ ಕಾರ್ಯ ನಡೆಯಲಿದೆ. ಕಾವೇರಿ ನೀರಿನ ವಿವಾದ ಕಾವೇರಿ ಮಾತೆಯ ಮೂಲಕವೇ ಪರಿಹಾರ ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಗಣೇಶ ಸ್ವರೂಪನಂದಗಿರಿ ತಿಳಿಸಿದರು. ಜು.6ರಂದು ಸಂಜೆ 6 ಗಂಟೆಗೆ ಭಾಗಮಂಡಲ ಸಂಗಮ ಬಳಿ ಕಾವೇರಿ ನದಿಗೆ ಮಹಾಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.