ಪ್ರಧಾನ ಸುದ್ದಿ

ಸ್ವಪಕ್ಷೀಯರಿಂದಲೇ ಕೈ ಸಚಿವರ ವಿವರ್ಣ

ಸ್ವಪಕ್ಷೀಯರಿಂದಲೇ ಕೈ ಸಚಿವರ ವಿವರ್ಣ
Published On :

ವಿಧಾನಸಭೆ: ಸರ್ಕಾರದ ಅನನುಭವಿ ಸಚಿವರ ಅಸಾಮರ್ಥ್ಯವನ್ನು ಆಡಳಿತ ಪಕ್ಷದ ಅನುಭವೀ ಸದಸ್ಯರೇ ಸದನದಲ್ಲಿ ಅನಾವರಣಗೊಳಿಸಿದ್ದಾರೆ. ಪ್ರತಿಪಕ್ಷಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿ ಆಡಳಿತ ಪಕ್ಷದ ಸದಸ್ಯರೇ ಮಾತನಾಡುತ್ತಿದ್ದು, ಪ್ರತಿಪಕ್ಷವೇ ಕೊಂಚ ಮಂಕಾದಂತಾಗಿದೆ.
ಅಷ್ಟು ಮಾತ್ರವಲ್ಲ, ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಖುದ್ದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮಿಂದಾಗಿ ಊರಲ್ಲಿ ನಾವು ಮಾನ-ಮರ್ಯಾದೆ ಇಲ್ಲವೇ ಎಂದು ಕೇಳಿಸಿಕೊಳ್ಳುವಂತಾಗಿದೆ ಎಂದು ಗುಡುಗಿದ್ದಾರೆ.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಸ್ಪೀಕರ್ ಕಿಡಿಕಾರಿದರೆ, ವೈದ್ಯ ಶಿಕ್ಷಣ ಇಲಾಖೆ ಬಗ್ಗೆ ಹಿರಿಯ ಸದಸ್ಯ ರಮೇಶ್‌ಕುಮಾರ್ ವಾಗ್ದಾಳಿ ನಡೆಸಿದ್ದಾರೆ. 'ಊಟ ಯಾರದ್ದೋ, ಪಾಯಿಖಾನೆ ಯಾರದ್ದೋ ಎಂಬ ರೀತಿ ಆಡಳಿತ ನಡೆಸಬೇಡಿ ಎಂದು ಸಚಿವರನ್ನು ಛೇಡಿಸಿದ್ದಾರೆ. ಇನ್ನೊಂದೆಡೆ ಇಲಾಖೆ ಚರ್ಚೆ ಮೇಲಿನ ಸ್ಪಷ್ಟೀಕರಣ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸಚಿವ ಕೃಷ್ಣ ಭೈರೇಗೌಡರ ಜತೆ ಮಾತಿನ ಜಂಗೀ ಕುಸ್ತಿ ನಡೆಸಿದ್ದಾರೆ.
ಸದನದಲ್ಲಿ ಇಷ್ಟೆಲ್ಲ ವಿದ್ಯಮಾನ ನಡೆದಾಗ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಮುಂದಿನ ಸಾಲಿನಲ್ಲಿ ಸಚಿವ ಟಿ.ಬಿ. ಜಯಚಂದ್ರ ಬಿಟ್ಟರೆ ಹಿರಿಯ ಸಚಿವರು ಇಲ್ಲದ್ದರಿಂದ ಕಿರಿಯ ಸಚಿವರು ತಮ್ಮ ಇಲಾಖೆ ಸಮರ್ಥನೆಗೆ ಹೆಣಗಾಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.