ಆಚಾರ, ವಿಚಾರ, ವ್ಯವಹಾರ ಶುದ್ಧವಾಗಿರಲಿ

ಸೂರಜ್ಕುಂಡ್: 'ಆಚಾರ, ವಿಚಾರ, ವ್ಯವಹಾರಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಿಂದ ದೂರವಿರಿ' ಲೋಕಸಭೆಗೆ ಮೊದಲ ಸಲ ಆಯ್ಕೆಯಾಗಿರುವ ಪಕ್ಷದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಉಪದೇಶವಿದು. ಹೊಸ ಸರ್ಕಾರದ ಚೊಚ್ಚಲ ಅಧಿವೇಶನಕ್ಕೆ (ಜು.7ರಿಂದ ಆರಂಭ) ಹೊಸ ಸಂಸದರನ್ನು ಸಜ್ಜುಗೊಳಿಸಲು ಪಕ್ಷ ಏರ್ಪಡಿಸಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು ಪ್ರಧಾನಿ.
- ನಾನೂ ಮೊದಲ ಸಲ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ಉತ್ತಮ ಸಂಸದೀಯಪಟುವಾಗಲು ನಾನೂ ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ.
- ನಿಮಗೆ ಗೊಂದಲ ಕಾಡಿದರೆ ಹಿರಿಯರಿಂದ ತಿಳಿದುಕೊಳ್ಳಲು ಮುಜುಗರ ಬೇಡ. ನಾನು ಅಥವಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೂ ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು.
- ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ನಮ್ಮೆಲ್ಲರ ಗುರಿಯೂ ಒಂದೇ. ಹೊಸ ಗೆಳೆಯರನ್ನು ಮಾಡಿಕೊಳ್ಳಲು, ಅವರಿಂದ ಹೊಸದನ್ನು ಕಲಿಯಲು ಪ್ರಯತ್ನಿಸಿ.
- ಯಾವುದಾದರೂ ನಿರ್ದಿಷ್ಟ ವಿಷಯದಲ್ಲಿ ಹೆಚ್ಚಿನ ಜ್ಞಾನ ಹೊಂದಲು ಪ್ರಯತ್ನಿಸಿ. ಸದನದಲ್ಲಿನ ನಿಮ್ಮ ಮಾತಿನಲ್ಲಿ ಅಧ್ಯಯನಶೀಲತೆ ತುಳುಕಾಡುತ್ತಿರಲಿ.
- ಮಾಧ್ಯಮಗಳೊಂದಿಗೆ ಹೆಚ್ಚು ಮಾತನಾಡಬೇಡಿ. ಆದರೆ ನಿಮ್ಮ ಸಾಧನೆಯನ್ನು ಜನರ ಮುಂದಿಡಲು, ಜನಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಹಿಂದೆ ಬೀಳಬೇಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


