ಬದುಕು ಸುಧಾರಿಸುವ ತಂತ್ರಜ್ಞಾನ ಬೇಕಿದೆ
ಬಾಗಲಕೋಟೆ: ಸಾಫ್ಟ್ವೇರ್ ಎಂಜಿನಿಯರ್ ಆದವರು ರೈತರಿಗೆ ಕೃಷಿ ಕ್ಷೇತ್ರದ ವಿವಿಧ ಮಾಹಿತಿ ನೀಡುವ ಹೊಸ ತಂತ್ರಾಶ, ತಂತ್ರಜ್ಞಾನ ಕಂಡು ಹಿಡಿದು ರೈತರಿಗೆ ಅನುಕೂಲ ಮಾಡಿ ಕೊಡಬೇಕು. ಸಾಮಾನ್ಯ ಜನರ ಬದುಕನ್ನು ಸುಧಾರಿಸಲು ತಂತ್ರಜ್ಞಾನ ಅನುಕೂಲವಾಗಬೇಕು ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಸಲಹೆ ನೀಡಿದ್ದಾರೆ.
ನವನಗರದಲ್ಲಿ ಬಾಗಲಕೋಟೆಯ ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ವರಚುಕ್ಸ್ ಸೆಲ್ಯೊಷನ್ ಆಶ್ರಯದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಅಂಗೈಯಲ್ಲಿ ಸಮಗ್ರ ಕೃಷಿ ಮಾಹಿತಿ ನೀಡುವ ಟ್ಯಾಬ್ಲೆಟ್ಗಳನ್ನು ವಿತರಿಸಿ ಮಾತನಾಡಿ, ಹಳ್ಳಿ ಹೈದರು ದೇಶ ಹಾಗೂ ವಿದೇಶಗಳಲ್ಲಿ ಸಾಫ್ಟ್ವೇರ್ ದಿಗ್ಗಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿದವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅದು ಸಾಮಾನ್ಯ ಜನತೆಗೆ ಬೇಡವಾಗಿದೆ. ಗ್ರಾಮಾಂತರ ಪ್ರದೇಶದ ಬಡವರಿಗೆ ನಾವು ತಿನ್ನಲು ಜೋಳ, ಗೋದಿ, ಅಕ್ಕಿ ನೀಡುತ್ತಿದ್ದೇವೆ. ತಂತ್ರಜ್ಞಾನ ರೈತರ, ಸಾಮಾನ್ಯರ ಬದುಕನ್ನು ಸುಧಾರಿಸಬೇಕು. ಆದರೆ ರಾಜ್ಯ ಹಾಗೂ ದೇಶದಲ್ಲಿ ಐಟಿ ಕ್ಷೇತ್ರದಲ್ಲಿ ಕೋಟಿಗಟ್ಟಲೆ ಲಾಭ ಗಳಿಸಿರುವ ಕಂಪನಿಗಳು ಕೃಷಿಕರತ್ತ ಗಮನ ಹರಿಸುತ್ತಿಲ್ಲ ಎಂದರು.
ಮಾಹಿತಿ ತಂತ್ರಜ್ಞಾನ ಸಚಿವರು ಐಟಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವದರ ಜೊತೆಗೆ ಹೊಸ ಅವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ರೈತರಿಗೆ ಕೃಷಿ ಕ್ಷೇತ್ರದ ವಿವಿಧ ಮಾಹಿತಿಗಳ ಜೊತೆ ರೈತರಿಗೆ ಬೇಕಾಗುವ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ಸಚಿವ ಎಸ್.ಆರ್. ಪಾಟೀಲ್ ಅವರ ಅಳಿಯನ ಗೌರಿಶಂಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಗ್ರಾಮೀಣ ಜನತೆ, ಪ್ರಧಾನಿ, ಕೃಷಿ ಸಚಿವರು, ದೇಶ, ರಾಜ್ಯದ ವಿಜ್ಞಾನಿಗಳು ಕಣ್ಣು ಬೀಡುವಂತೆ ಸಾಧನೆ ಮಾಡಿದ ಗೌರಿಶಂಕರ ಕಾರ್ಯ ಶ್ಲಾಘನೀಯ. ತಂತ್ರಜ್ಞಾನ ನಮ್ಮ ಅವಶ್ಯಕತೆ ತಕ್ಕಂತೆ ಅವಿಷ್ಕಾರ ಆಗುತ್ತಿಲ್ಲ. ವಿದೇಶದಲ್ಲಿ ಕಂಪನಿಗಳು ಬೇರೆ ಬೇರೆ ದೇಶದ್ದು ಇರಬಹುದು. ಆದರೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕರು ಭಾರತೀಯರಾಗಿದ್ದಾರೆ ಎಂದರು.
ಯಡಿಯೂರಪ್ಪಗೆ ಸೆಡ್ಡು: ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಶೇ.4 ಬಡ್ಡಿ ದರದಲ್ಲಿ ಸಾಲ ನೀಡಿದ್ದರೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಸಹಕಾರ ಕ್ಷೇತ್ರದಲ್ಲಿ ಇದ್ದು ತಾವು ಅಧ್ಯಕ್ಷರಾಗಿದ್ದ ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಮೂಲಕ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಿ ಸಹಕಾರದಿಂದ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದರು. ಅಂದುಕೊಂಡಿದ್ದನ್ನು ಮಾಡಿ ತೋರಿಸಿದ ಛಲಗಾರರು ಎಂದರು.
ಟ್ಯಾಬ್ಲೆಟ್ ಸಂಂಶೋಧನೆ ಮಾಡಿದ ವಿಜ್ಞಾನಿಗಳನ್ನು ಸನ್ಮಾನಿಸಲಾಯಿತು. ಬಿಜಾಪೂರ ಹಾಗೂ ಬಾಗಲಕೋಟೆ ಜಿಲ್ಲೆಯ 10 ಪ್ರಗತಿ ಪರ ರೈತರಿಗೆ ಟ್ಯಾಬ್ಲೆಟ್ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

