ರಾಗಾ v/s ನಮೋ

ಲೋಕ ಚುನಾವಣೆಯ ರಂಗು ನಿಂತಿರುವುದೇ ರಾಗಾ v/s ನಮೋ ಸ್ಪರ್ಧೆಯಲ್ಲಿ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಮಾದರಿಯಲ್ಲಿ ನಡೆಯುತ್ತಿರುವ ಈ ಚುನಾವಣೆ ಪ್ರಧಾನಿ ಯಾರಾಗಬೇಕು ಎಂಬ ಆಧಾರದ ಮೇಲೆ ನಡೆಯುತ್ತಿದೆ. ಕಾಂಗ್ರೆಸ್ನ ಅನಧಿಕೃತ ಮತ್ತು ಬಿಜೆಪಿ ಪ್ರಧಾನಿಯ ಅಧಿಕೃತ ಪ್ರಧಾನಿ ಅಭ್ಯರ್ಥಿಗಳ ಕುರಿತ ವಿವರ ಇಲ್ಲಿದೆ...
ರಾಹುಲ್ ಗಾಂಧಿ
ವಯಸ್ಸು: 43
ವಿದ್ಯಾರ್ಹತೆ: ಹಾರ್ವರ್ಡ್ ವಿವಿ ಪದವೀಧರ
ರಾಜಕೀಯ ಅನುಭವ
2004 ರಾಜಕೀಯಕ್ಕೆ ಪದಾರ್ಪಣೆ
2013 ಪಕ್ಷದ ಉಪಾಧ್ಯಕ್ಷನಾಗಿ ಆಯ್ಕೆ
ಯುವ ಮುಖಂಡ
ಕೇವಲ ಹಿರಿತಲೆಗಳೇ ತುಂಬಿರುವ ಕಾಂಗ್ರೆಸ್ನ ಭವಿಷ್ಯದ ನಾಯಕ. ಯುವಕರೆಲ್ಲ ಬಿಜೆಪಿಯತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ಗೊಂದು ಹೊಸ ರೂಪ ನೀಡುವ ಕನಸುಹೊತ್ತ ಮುಖಂಡ. ಪಕ್ಷದ ಸಂರಚನೆ, ಚುನಾವಣಾ ವ್ಯವಸ್ಥೆಯಲ್ಲಿ ಈಗಾಗಲೇ ಒಂದಷ್ಟು ಬದಲಾವಣೆ ಮಾಡಿದ್ದಾರೆ. ಲೋಕಪಾಲ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಅನೇಕ ಮಸೂದೆಗಳಿಗೆ ಬೆಂಬಲ ನೀಡುವ ಮೂಲಕ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ಧನಾತ್ಮಕ ಅಂಶಗಳು
- ಯುವಮುಖ
- ಹೊಸ ಚಿಂತನೆಗಳು
- ಕಳಂಕಿತರಲ್ಲದವರಿಗೆ ಟಿಕೆಟ್ ನೀಡಲು ಪ್ರೋತ್ಸಾಹ
- ದೂರದೃಷ್ಟಿ
ಋಣಾತ್ಮಕ ಅಂಶಗಳು
- ಮೋದಿಗೆ ಹೋಲಿಸಿದರೆ ಮಾತು ಸಪ್ಪೆ
- ರಾಜಕೀಯ ಅನುಭವ ಇಲ್ಲ
- ಗಾಂಧಿ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಉನ್ನತ ಹುದ್ದೆಗೆ
- ಹಿರಿಯ ಮುಖಂಡರಿಂದಲೇ ಗಾಂಧಿ ಸಾಮರ್ಥ್ಯ ಕುರಿತು ಅಪನಂಬಿಕೆ
ಹೊರಗಿನಿಂದ ಬಂದವರು
120 ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಹೊಸಮುಖ. ಗಾಂಧಿ ಕುಟುಂಬದ ಹಿನ್ನಲೆ ಹೊಂದಿದ್ದರೂ ರಾಹುಲ್ರ ಅನೇಕ ಚಿಂತನೆಗಳಿಗೆ ಪಕ್ಷದ ಹಿರಿಯ ಮುಖಂಡರಿಂದಲೇ ವಿರೋಧವಿದೆ. ಹಿರಿ ಮತ್ತು ಕಿರಿ ತಲೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಮುನ್ನಡೆಸುವ ಸವಾಲಿದೆ.
ಸಂಚಾರ
34,016 ಕಿ.ಮೀ
ರಾಹುಲ್ ಟೀಂ
-ಜೈರಾಂ ರಮೇಶ್
ಕೇಂದ್ರ ಸಚಿವ. ರಾಹುಲ್ ಅವರ ಮುಖ್ಯ ಸಲಹೆಗಾರ
-ಮಧುಸೂದನ್ ಮಿಸ್ತ್ರಿ
ಉತ್ತರಪ್ರದೇಶದಲ್ಲಿ ಪಕ್ಷವನ್ನು ಕಟ್ಟುವ ಜವಾಬ್ದಾರಿ
-ಸಚಿನ್ ರಾವ್
ಸಾಮಾಜಿಕ ಕಲ್ಯಾಣ ಯೋಜನೆ ಸಿದ್ಧಪಡಿಸಲು ನೆರವು
- ದೀಪೇಂದರ್ ಹೂಡಾ
ಹರ್ಯಾಣ ಸಂಸದ, ಪಕ್ಷದ ಸಾಮಾಜಿಕ ಜಾಲತಾಣ ಆಂದೋಲನ ನಿರ್ವಹಣೆ
-ರಾಜೀವ್ ಸತ್ವ
ರಾಹುಲ್ ಅಜೆಂಡಾ ಅನುಷ್ಠಾನಕ್ಕೆ ತರುವ ಕೆಲಸ ನಿರ್ವಹಣೆ
----------
ನರೇಂದ್ರ ಮೋದಿ
ವಯಸ್ಸು: 63
ವಿದ್ಯಾರ್ಹತೆ: ರಾಜಕೀಯ ಶಾಸ್ತ್ರದಲ್ಲಿ ಎಂಎ
ರಾಜಕೀಯ ಅನುಭವ
2001
ರಿಂದ ಗುಜರಾತ್ ಮುಖ್ಯಮಂತ್ರಿಯಾಗಿದ್ದಾರೆ. ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ದೇಶದ ಮೊದಲ ಮುಖ್ಯಮಂತ್ರಿ
ಆರ್ಥಿಕ ಮುನ್ನೋಟ
ಮೋದಿ ಅವರಿಗೆ ಆರ್ಥಿಕ ಮುನ್ನೋಟ ಇಲ್ಲ ಎನ್ನುವ ಆರೋಪ ಪದೇ ಪದೆ ಕೇಳಿ ಬರುತ್ತಲೇ ಇದೆ. ಆದರೆ, ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಉದ್ದಿಮೆಗಳ ಪರ ಮುಖಂಡ ಎನ್ನುವ ಹೆಸರುಗಳಿಸಿದ್ದಾರೆ. ಉತ್ತಮ ಆಡಳಿತ ಮತ್ತು ನಗರಾಭಿವೃದ್ಧಿಗಾಗಿ ಉದ್ದಿಮೆದಾರರೂ ಮೋದಿ ಅವರನ್ನು ಮೆಚ್ಚುತ್ತಾರೆ. ಹಣದುಬ್ಬರ ಸೇರಿದಂತೆ ದೇಶವನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳ ಕುರಿತು ಮೋದಿ ಮಾತನಾಡುತ್ತಾರೆ. ಆದರೆ, ಎಫ್ಡಿಐ ಮತ್ತು ತೆರಿಗೆ ನೀತಿ, ಆರೋಗ್ಯ ಸೇವೆಗಳ ವಿಚಾರದಲ್ಲಿ ಗೊಂದಲವಿದ್ದಂತಿದೆ. ಎಫ್ಡಿಐ ವಿಚಾರದಲ್ಲಿ ಪಕ್ಷ ಮತ್ತು ಮೋದಿ ಅವರ ನೀತಿಗಳು ತದ್ವಿರುದ್ಧವಾಗಿರುವಂತಿವೆ.
ಧನಾತ್ಮಕ ಅಂಶಗಳು
- ಗುಜರಾತ್ ಸಿಎಂ ಆಗಿ 3 ಬಾರಿ ಆಯ್ಕೆ
- ಗುಜರಾತ್ ಅನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ನಿರ್ಮಿಸಿದ ಹೆಗ್ಗಳಿಕೆ
- ಸಂಘಟನಾ ಚತುರ, ಆಡಳಿತಗಾರ
- ಅಭಿವೃದ್ಧಿಯ ಹರಿಕಾರ
- ಉದ್ಯಮ ಸ್ನೇಹಿ, ದೂರದೃಷ್ಟಿಯುಳ್ಳ ನಾಯಕ
ಋಣಾತ್ಮಕ ಅಂಶಗಳು
- 2002ರ ಗೋಧ್ರೋತ್ತರ ಹಿಂಸಾಚಾರ ತಡೆಯುವಲ್ಲಿ ವಿಫಲ.
- ಉಗ್ರ ಹಿಂದುವಾದ
- ಮುಖ್ಯಮಂತ್ರಿಯಾಗಿ ಈವರೆಗೆ ಗಲಭೆಗೆ ಸಂಬಂಧಿಸಿ ಕ್ಷಮೆ ಕೋರದೇ ಇದ್ದದ್ದು
ಹಿಂದೂ ರಾಷ್ಟ್ರೀಯ ವಾದ
ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರಿಗೆ ಮೋದಿ ಅವರನ್ನು ಹೋಲಿಸಲಾಗುತ್ತಿದ್ದರೂ ಧರ್ಮದ ವಿಚಾರಕ್ಕೆ ಬಂದಾಗ ಮೋದಿ ಭಿನ್ನವಾಗಿ ನಿಲ್ಲುತ್ತಾರೆ. ವಾಜಪೇಯಿ ಅವರನ್ನು ವಿಪಕ್ಷಗಳೂ ಜಾತ್ಯತೀತ ನಾಯಕ ಎಂದು ಬಣ್ಣಿಸುತ್ತವೆ. ಆದರೆ, ಮೋದಿಗೆ ಆ ವಿಶೇಷಣದ ಭಾಗ್ಯ ಇಲ್ಲ. ಆದರೆ, ಮೋದಿ ಗುಜರಾತ್ ಅಭಿವೃದ್ಧಿಯಿಂದಲೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಸಂಚಾರ
45,339 ಕಿ.ಮೀ
ಮೋದಿ ಟೀಂ
- ಅಮಿತ್ ಷಾ
ಮೋದಿಯವರ ಆಪ್ತೇಷ್ಟ. ಮೋದಿ ರಾಜಕೀಯ ತಂಡದ ಮುಖ್ಯಸ್ಥ
-ಅರವಿಂದ ಗುಪ್ತ
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ. ನವದೆಹಲಿಯಲ್ಲಿ ಕಾರ್ಯ
-ಅನುಪಮ್ ತ್ರಿವೇದಿ
ಸಾಮಾಜಿಕ ಜಾಲ ತಾಣ ತಂಡದ ಮುಖ್ಯಸ್ಥ
- ಪಿಯೂಶ್ ಗೋಯಲ್
ಮೋದಿಗೆ ಆತ್ಮೀಯರಾಗಿರುವ ಬಿಜೆಪಿ ಮುಖಂಡ.
-ರಾಜೇಶ್ ಜೈನ್
ಮುಂಬೈನಿಂದ ಕಾರ್ಯ, ಉದ್ಯಮಿ, ಇಂಡಿಯಾ ಇನ್ಫೋಲೈನ್ನ ಸ್ಥಾಪಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


