ಪ್ರಧಾನ ಸುದ್ದಿ

ರುಬ್ಬುವ ಕೈಗೆ ಲೋಕ ಗಾರುಡಿ

Published On :

ಮಂಗಳೂರು: ಹೊಟೇಲ್‌ನಲ್ಲಿ ರುಬ್ಬುವುದು ಮೂಲ ವೃತ್ತಿ, ಭ್ರಷ್ಟಾಚಾರ, ಲಂಚಕೋರರ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದು ಪ್ರವೃತ್ತಿ. ವಿಶ್ವಭವನ ಹೊಟೇಲ್‌ನಲ್ಲಿ ಕಾರ್ಮಿಕರಾಗಿರುವ ಸುದತ್ ಜೈನ್ ಶಿರ್ತಾಡಿ ತಮ್ಮ ಸತ್ಯಾಗ್ರಹಗಳಿಗೆ ಸಿಕ್ಕ ಬೆಂಬಲ ಹಿನ್ನೆಲೆಯಲ್ಲಿಯೇ ಈ ಬಾರಿ ಪಕ್ಷೇತರನಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಕಾರ್ಮಿಕರ ಒಳಿತಿಗೆ ಮತ್ತು ಭ್ರಷ್ಟಾಚಾರ ವಿರೋಧಿಸಿ ನಾಲ್ಕು ವರ್ಷದಲ್ಲಿ 10 ಬಾರಿ ಒಟ್ಟು 63 ದಿನ ಉಪವಾಸ ಸತ್ಯಾಗ್ರಹ ಮಾಡಿದ ದಾಖಲೆ ಇವರಿಗಿದೆ. ಕಾರ್ಮಿಕರಿಗೆ ಆರೋಗ್ಯ ಭದ್ರತೆ ಸಿಗಬೇಕೆಂದು 2009 ಮಾ.19ರಿಂದ 3 ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ಇಎಸ್‌ಐ ಆಸ್ಪತ್ರೆ ಅವ್ಯವಸ್ಥೆ ವಿರುದ್ಧವೇ 7 ಬಾರಿ 49 ದಿನ ಸತ್ಯಾಗ್ರಹ ಮಾಡಿದ್ದಾರೆ. ಅಣ್ಣಾ ಹಜಾರೆ ಮೊದಲ ಬಾರಿ ಕರೆ ನೀಡಿದಾಗ 7 ದಿನ, ಮತ್ತೊಮ್ಮೆ 3 ದಿನ ಉಪವಾಸ, ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ 4 ದಿನ ಉಪವಾಸ ಮಾಡಿದ ದಾಖಲೆ ಇದೆ.
ಇವರ ಹೋರಾಟಗಳಿಂದ 39 ವೈದ್ಯರು ಅಮಾನತುಗೊಂಡಿದ್ದರು. ವೈದ್ಯಕೀಯ ಅಧೀಕ್ಷಕರೇ ವರ್ಗಾವಣೆಗೊಂಡಿದ್ದರು. 17 ವರ್ಷಗಳಿಂದ ಬ್ಲಾಕ್ ಆಗಿದ್ದ ವೈದ್ಯಕೀಯ ತ್ಯಾಜ್ಯಗಳು ಹೋಗುತ್ತಿದ್ದ ಚರಂಡಿ ಚೇಂಬರ್ ಹೋರಾಟದ ಬಳಿಕ ಸರಿ ಆಗಿತ್ತು. ಇಎಸ್‌ಐ ಆಸ್ಪತ್ರೆ ಸುಧಾರಣೆಯಾಗಿ ಕಾರ್ಮಿಕರಿಗೆ ಲಂಚರಹಿತ ಚಿಕಿತ್ಸೆಗೆ ಅವಕಾಶ ಸಿಕ್ಕಿತು ಎಂದಿದ್ದಾರೆ. ಗೆಲ್ಲಲ್ಲ, ಆದ್ರೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.       

ಜನರೇ ಹಣ ನೀಡುತ್ತಾರೆ!
ಪಕ್ಷೇತರರಾಗಿ ಸ್ಪರ್ಧಿಸುವಾಗ ನಾಮಪತ್ರ ಸಲ್ಲಿಸಬೇಕಾದರೆ ಹತ್ತು ಜನ ಬೆಂಬಲಿಸಲೇ ಬೇಕು. ಹತ್ತು ಮಂದಿ ತಲಾ 3 ಸಾವಿರ ಸಂಗ್ರಹಿಸಿ ನನಗೆ ನೀಡುತ್ತಾರೆ. 30 ಸಾವಿರದಲ್ಲಿ 25 ಸಾವಿರ ಠೇವಣಿಗೆ ಮತ್ತು 5 ಸಾವಿರ ಖರ್ಚು ಮಾಡುತ್ತೇನೆ. ಸತ್ಯಾಗ್ರಹಗಳಿಂದ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿದೆ. ಜನಪ್ರತಿನಿಧಿಯಾದರೆ ಅಥವಾ ಸ್ಪರ್ಧೆಗೆ ಇಳಿದರೆ ನಮ್ಮ ಹೋರಾಟಗಳಿಗೆ ಬಲ ಬರುತ್ತದೆ ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಎಲ್ಲರೂ ಆಮ್ ಆದ್ಮಿಗಳೇ ನಾನು ಮಾತ್ರ ನಿಜವಾದ 'ಆಮ್ ಆದ್ಮಿ' ಎನ್ನುತ್ತಾರೆ ಜೈನ್.

 ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.