ಟ್ವೀಟ್ ಬ್ಯಾಂಕ್ ರಾಜಕಾರಣ

ಟ್ವಿಟರ್ ಖದರ್
ನವದೆಹಲಿ: ಇದು ಡಿಜಿಟಲ್ ಸಮರ!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ತಿಳಿದೊಡನೆ ರಾಜಕೀಯ ಸಮರಕ್ಕೂ ಡಿಜಿಟಲ್ ಟಚ್ ಸಿಕ್ಕಿದೆ.
ಆನ್ಲೈನ್ ಬಗ್ಗೆ ಈವರೆಗೆ ತಲೆಕೆಡಿಸಿಕೊಂಡಿರದ ವಿವಿಧ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲ ತಾಣಗಳತ್ತ ಕಣ್ಣು ಹೊರಳಿಸಲು ಆರಂಭಿಸಿವೆ. ಟ್ವಿಟರ್, ಫೇಸ್ಬುಕ್ನಂತಹ ತಾಣಗಳಲ್ಲಿ ರಾಜಕೀಯ ಘಟಾನುಘಟಿಗಳು ಖಾತೆ ತೆರೆದಿದ್ದಾರೆ. ಹೇಗಾದರೂ ಮಾಡಿ ಯುವ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿಯೇ ಇಂಥ ಕಸರತ್ತು.
ಬಿಜೆಪಿಯೇ ಮುಂದು: ತಮ್ಮ ಎಲ್ಲ ಪ್ರತಿಸ್ಫರ್ಧಿಗಳಿಗಿಂತ ಮೊದಲು ತಂತ್ರಜ್ಞಾನವನ್ನು ಆಲಂಗಿಸಿಕೊಂಡ ಪಕ್ಷವೆಂದರೆ ಬಿಜೆಪಿ. ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಯಾವುದೇ ಸಾಂಪ್ರದಾಯಿಕ ಮಾಧ್ಯಮಗಳನ್ನು ಅವಲಂಬಿಸದೇ ಸಾಮಾಜಿಕ ತಾಣಗಳ ಮೂಲಕ ಬೆಂಬಲಿಗರೊಡನೆ ಸಂವಾದ ಆರಂಭಿಸಿದರು. ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಮೋದಿ ಅವರು, ಸಾಮಾಜಿಕ ತಾಣಗಳಲ್ಲಿ ಖಾತೆ ತೆರೆಯುವಂತೆ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ್ದರು.
ಕಾಂಗ್ರೆಸ್ ಲೇಟ್ ಎಂಟ್ರಿ: ಸಾಮಾಜಿಕ ತಾಣಗಳಲ್ಲಿ ಮೋದಿ ಅವರ ಜನಪ್ರಿಯತೆಯನ್ನು ಮನಗಂಡ ಬಳಿಕವಷ್ಟೇ ಕಾಂಗ್ರೆಸ್ ಎಚ್ಚೆತ್ತಿತು. ನಂತರ ದೀಪೇಂದ್ರ ಸಿಂಗ್ ಹೂಡಾ ನೇತೃತ್ವದಲ್ಲಿ ಸಾಮಾಜಿಕ ತಾಣ ಘಟಕವೊಂದನ್ನು ಸ್ಥಾಪಿಸಿತು. ಜತೆಗೆ, ಡಿಜಿಟಲ್ ಚುನಾವಣಾ ತಂತ್ರಗಳ ಬಗ್ಗೆ ರಾಜ್ಯ ಘಟಕದವರಿಗೆ ಕಾರ್ಯಾಗಾರವನ್ನೂ ಏರ್ಪಡಿಸಿತು. ಈಗ ಕಾಂಗ್ರೆಸ್ನ ಎಲ್ಲ ಕಾರ್ಯಕ್ರಮಗಳು, ರ್ಯಾಲಿಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಲಾಗುತ್ತಿದೆ.
ಆಪ್ ಕೂಡ ಹಿಂದೆಬಿದ್ದಿಲ್ಲ: ಆಪ್ನಲ್ಲಿ 20 ಮಂದಿಯ ತಂಡವೊಂದನ್ನು ರಚಿಸಲಾಗಿದೆ. ಯಾವುದಾದರೂ ಘಟನೆ ನಡೆದಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಹಾಗೂ ಯಾವ ಹ್ಯಾಷ್ ಟ್ಯಾಗ್ ಬಳಸಬೇಕು ಎಂಬುದನ್ನು ಈ ತಂಡ ನಿರ್ಧರಿಸುತ್ತದೆ. ನಂತರ ಈ ತಂಡವು ಸಂದೇಶವನ್ನು 16 ಸಾವಿರ ಸದಸ್ಯರಿಗೆ ಕಳುಹಿಸಿಕೊಡುತ್ತದೆ. ಮಾ.2ರಂದು ಕೇಜ್ರಿವಾಲ್ ಕಾನ್ಪುರ ರ್ಯಾಲಿಯಲ್ಲಿದ್ದರೆ, ಮೋದಿ ಲಖನೌನಲ್ಲಿ ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ಮೋದಿ ಅವರ (#)Namoinlucknow ಗೆ ಪ್ರತಿಯಾಗಿ ಆಪ್ ) #)Kejriwalatkanpur ಹ್ಯಾಷ್ಟ್ಯಾಗ್ ಅನ್ನು ಬಳಸಿತ್ತು.
[ ನ್ಯೂ ಏಜ್ ಕ್ಯಾಂಪೇನ್ 84 ]
ಟ್ವಿಟರ್ ಖದರ್
ಟ್ವಿಟರ್ನ ನಂಬರ್ ಗೇಮ್ನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೂ, ಇತ್ತೀಚೆಗಷ್ಟೇ ಖಾತೆ ತೆರೆದ ಲಾಲು ಹಿಂದೆ ಬಿದ್ದಿಲ್ಲ.
ಅರವಿಂದ ಕೇಜ್ರಿವಾಲ್ (ಆಪ್) 15,08,235
ಅಜಯ್ ಮಾಕನ್ (ಕಾಂಗ್ರೆಸ್) 2,69,473
ನರೇಂದ್ರ ಮೋದಿ (ಬಿಜೆಪಿ) 35,51,716
ಶಶಿ ತರೂರ್ (ಕಾಂಗ್ರೆಸ್) 21,17,441
ಸುಷ್ಮಾ ಸ್ವರಾಜ್ (ಬಿಜೆಪಿ) 9,79,285
ಲಾಲು ಪ್ರಸಾದ್ (ಆರ್ಜೆಡಿ) 16,473
ಅರುಣ್ ಜೇಟ್ಲಿ (ಬಿಜೆಪಿ) 1,45,806
ಯೋಗೇಂದ್ರ ಯಾದವ್ (ಆಪ್) 1,49,254
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


