ರಾಹುಲಿ ತೋಳೇರಿಸಿದರೆ ನಾಯಕರು ಇಲಿ

ನವದೆಹಲಿ: 10 ವರ್ಷಗಳ ಕಾಲ ಅಧಿಕಾರದ ರುಚಿ ಅನುಭವಿಸಿ, ಈಗ ಚುನಾವಣೆಗೆ ನಿಲ್ಲಲ್ಲ ಅಂತೀರಾ...?
ಹೀಗಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೋಳೇರಿಸಿ ಗುಟುರು ಹಾಕಿದರೆ ಅಷ್ಟೇ, ಸ್ಪರ್ಧಿಸಲು ಒಲ್ಲೆ ಎಂದು ಬಂದವರೆಲ್ಲ, 'ಹೌದು ನಿಲ್ತೇವೆ' ಎಂದು ಹೇಳಿ ಹೋಗಬೇಕಷ್ಟೇ.
ಹೌದು, ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಮನೋಭಾವ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರ ಮನೋಭಾವ ಅವರನ್ನು ಕೆರಳಿಸಿದೆ. ಯುಪಿಎ 1 ಮತ್ತು ಯುಪಿಎ 2 ರಲ್ಲಿ ಪ್ರಭಾವದ ಖಾತೆಗಳನ್ನೇ ಹೊಂದಿ, ಇದೀಗ ಆಡಳಿತ ವಿರೋಧಿ ಅಲೆ ಇದೆ ಎಂಬ ಸಮೀಕ್ಷೆಗಳ ವರದಿಗಳನ್ನು ನಂಬಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವೂ ಅವರು ಕೆರಳಲು ಕಾರಣ ಎನ್ನಲಾಗಿದೆ. ನಾಯಕರ ಇಂಥ ಮನೋಭಾವ ಜನರಿಗೆ ತಪ್ಪು ಸಂದೇಶ ಕೊಡುತ್ತೆ ಎಂಬುದು ರಾಹುಲ್ ಸಿಟ್ಟಿಗೆ ಕಾರಣ.
ರಾಹುಲ್ ಗಾಂಧಿ ಅವರ ತೋಳೇರಿಸುವ ಈ ಸಿಟ್ಟೇ ಸ್ಪರ್ಧಿಸಲ್ಲ ಎಂದು ಹೇಳುತ್ತಿದ್ದ ಮನೀಷ್ ತಿವಾರಿ, ಶಕೀಲ್ ಅಹ್ಮದ್ರಂಥ ಹಿರಿಯ ನಾಯಕರು ಹೆದರಿ ಈಗ ಸ್ಪರ್ಧಿಸಲು ಕಾರಣ ಎಂದು ಮೂಲಗಳು ಹೇಳುತ್ತಿವೆ. ಇದಷ್ಟೇ ಅಲ್ಲ, ಸ್ಪರ್ಧಿಸುವುದಿಲ್ಲ ಎಂದ ಸಾಲು ಸಾಲು ನಾಯಕರೀಗ ರಾಹುಲ್ ಸಿಟ್ಟಿಗೆ ಕರಗಲೇಬೇಕಾದಂಥ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಶಿವಗಂಗೆಯಿಂದ ಸ್ಪರ್ಧಿಸಲ್ಲ ಎಂದು ಹೇಳುತ್ತಿರುವ ಚಿದಂಬರಂ ಮೇಲೂ ರಾಹುಲ್ ಸಿಟ್ಟು ಕೆಲಸ ಮಾಡಿದೆ. ಅವರೂ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.
ಹಿರಿಯರ ಸಿಟ್ಯಾಕೆ?
ಮೂಲಗಳು ಹೇಳುವಂತೆ, ಕಾಂಗ್ರೆಸ್ನ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ನಾಯಕತ್ವದಡಿಯಲ್ಲಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲವಂತೆ. ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ರಾಹುಲ್ ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣವೂ ಈ ನಿರ್ಧಾರದಲ್ಲಿದೆ ಎಂದು ಎಐಸಿಸಿ ನಾಯಕರೊಬ್ಬರು ಹೇಳುತ್ತಾರೆ. ಹೀಗಾಗಿ ಅವರು ಚುನಾವಣಾ ರಾಜಕೀಯವನ್ನೇ ಬಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


