ಪ್ರಧಾನ ಸುದ್ದಿ

ಶುಭ ಶುಕ್ರವಾರಕ್ಕೆ ಚುನಾವಣೆ ಕೊಕ್ಕೆ!

Published On :

ವಿಶೇಷ ವರದಿ
ಧಾರವಾಡ:
ಕ್ರೈಸ್ತ ಬಾಂಧವರು ಶ್ರದ್ಧೆ-ಭಕ್ತಿಯಿಂದ ಆಚರಿಸುವ ಶುಭ ಶುಕ್ರವಾರ (ಗುಡ್ ಫ್ರೈ ಡೇ) ಹಬ್ಬಕ್ಕೆ ಪ್ರಸಕ್ತ ಲೋಕಸಭೆ ಚುನಾವಣೆ ಕೊಕ್ಕೆ ಹಾಕಲಿದೆಯೇ ಎಂಬ ಕಳವಳ ಇದೀಗ ಕ್ರೈಸ್ತರಲ್ಲಿ ಉಂಟಾಗಿದೆ. ಚುನಾವಣೆ ರಾಜಕೀಯ ಮಂದಿ ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದ್ದರೆ, ಕ್ರೈಸ್ತ ಬಾಂಧವರಲ್ಲಿ ಮಾತ್ರ ತುಸು ಬೇಸರ ಮೂಡಿಸಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಏ. 17ರಂದು ನಡೆಯಲಿದ್ದು, ಮರುದಿನ ಏ. 18ರಂದು ಗುಡ್ ಫ್ರೈಡೇ ಹಬ್ಬ ನಡೆಯಲಿದೆ. ಚುನಾವಣೆ ಕಾರ್ಯಕ್ಕೆಂದು ನಿಯೋಜನೆಗೊಳ್ಳುವ ಕ್ರೈಸ್ತ ಬಾಂಧವರೆಲ್ಲ ಪವಿತ್ರ ಧಾರ್ಮಿಕ ಹಿನ್ನೆಲೆಯಿರುವ ಹಬ್ಬದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.
ಏಸುವಿನ ಪ್ರಾಣ ತ್ಯಾಗದ ದಿನ: ಶುಭ ಶುಕ್ರವಾರ ಕ್ರೈಸ್ತರಿಗೆ ಹರ್ಷದಾಯಕ ಹಬ್ಬವೇನಲ್ಲ. ಏಸು ಕ್ರಿಸ್ತ ಶಿಲುಬೆಗೇರಿ ಪ್ರಾಣತ್ಯಾಗ ಮಾಡಿದ ದಿನ. ಕ್ರೈಸ್ತ ಬಾಂಧವರೆಲ್ಲ ಈ ಹಬ್ಬವನ್ನು ಏಸುವಿನ ತ್ಯಾಗ ಬಲಿದಾನದ ಸ್ಮರಣೆಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸುವರು. ಶುಕ್ರವಾರದ ಬಳಿಕ ಬರುವ ಭಾನುವಾರದಂದು ಏಸು ಪುನರುತ್ಥಾನಗೊಳ್ಳುತ್ತಾನೆಂಬುದು ಕ್ರೈಸ್ತರ ನಂಬಿಕೆ. ಹೀಗಾಗಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದಲ್ಲಿ ಪ್ರತಿಯೊಬ್ಬ ಕ್ರೈಸ್ತರೂ 45 ದಿನಗಳ ಕಾಲ ಉಪವಾಸ ವ್ರತ ಮಾಡುತ್ತಾರೆ. ಸೂರ್ಯೋದಯದ ಬಳಿಕ ಏನನ್ನೂ ಸ್ವೀಕರಿಸದೆ, ನಿತ್ಯ ಸಂಜೆ ಚರ್ಚ್‌ಗಳಲ್ಲಿ ವಿಶೇಷ ಪ್ರವಚನ, ವ್ಯಾಖ್ಯಾನ, ಪ್ರಾರ್ಥನೆಯ ಬಳಿಕ ಆಹಾರ ಸೇವಿಸುತ್ತಾರೆ. ಹಬ್ಬದ ವೇಳೆ ಚುನಾವಣಾ ಕಾರ್ಯಕ್ಕೆ ನಿಯೋ ಜನೆ ಮಾಡಿದ್ದು ಕ್ರೈಸ್ತ ನೌಕರರ ಚಿಂತೆಗೆ ಕಾರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.