ಪ್ರಧಾನ ಸುದ್ದಿ

ಎರಡೆರಡು ಬಾರಿ ಮತ ಹಾಕ್ಬೇಕಂತೆ!

ಎರಡೆರಡು ಬಾರಿ ಮತ ಹಾಕ್ಬೇಕಂತೆ!
Published On :

ಮುಂಬೈ: 'ಎರಡೆರಡು ಬಾರಿ ಮತ ಹಾಕುವ ಮೂಲಕ ಬಹುಹಂತದ ಮತದಾನದ ಲಾಭ ಪಡೆಯಿರಿ.'
 ಇಂತಹುದೊಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಬೇರ್ಯಾರೂ ಅಲ್ಲ. ಎನ್‌ಸಿಪಿ ಮುಖ್ಯಸ್ಥ, ಕೇಂದ್ರ ಸಚಿವ ಶರದ್ ಪವಾರ್. ನಿಮ್ಮ ಸ್ವಂತ ಊರಿನಲ್ಲೊಮ್ಮೆ, ಕೆಲಸ ಮಾಡುವ ಊರಿನಲ್ಲೊಮ್ಮೆ, ಹೀಗೆ ಎರಡು ಬಾರಿ ಹಕ್ಕು ಚಲಾಯಿಸಿ ಎನ್ನುವ ಪುಕ್ಕಟೆ ಸಲಹೆ ನೀಡುವ ಮೂಲಕ ಪವಾರ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.  ಭಾನುವಾರ ಇಂತಹ ಹೊಣೆಗೇಡಿ ಮಾತುಗಳನ್ನು ಆಡಿದ್ದಾರೆ. ಆದರೆ, ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಎಚ್ಚೆತ್ತ ಪವಾರ್, ನಾನು ತಮಾಷೆಗೆ ಆ ಮಾತನ್ನು ಹೇಳಿದ್ದೆ ಎಂದಿದ್ದಾರೆ.
ಜೈಲು ಶಿಕ್ಷೆ: ಪವಾರ್ ನೀಡಿರುವ ಈ ಹೇಳಿಕೆ ದೇಶದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171ಡಿ ಮತ್ತು 171 ಎಫ್ ಅನ್ವಯ ಒಬ್ಬ ವ್ಯಕ್ತಿ ಎರಡು ಕಡೆ ಮತದಾನ ಮಾಡುವುದು, ಅದಕ್ಕೆ ಪ್ರೇರೇಪಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಪವಾರ್ ಸಲಹೆಯಿದು
- 2009ರ ಲೋಕಸಭೆ ಚುನಾವಣೆ ವೇಳೆ ಸತಾರಾ ಹಾಗೂ ಮುಂಬೈನಲ್ಲಿ ಒಂದೇ ದಿನ ಮತದಾನ ನಿಗದಿಯಾಗಿತ್ತು. ಹಾಗಾಗಿ ನೀವೆಲ್ಲರೂ ನಿಮ್ಮ ನಿಮ್ಮ ಊರುಗಳಿಗೆ ತೆರಳಿ ಮತ ಚಲಾಯಿಸಿದಿರಿ.
- ಆದರೆ ಈ ಬಾರಿ ಎರಡೂ ಕಡೆ ಬೇರೆ ಬೇರೆ ದಿನಗಳಲ್ಲಿ ಮತದಾನ ನಡೆಯಲಿದೆ. ಹಾಗಾಗಿ ಏ.17ರಂದು ಸತಾರಾಗೆ ಹೋಗಿ ನಮ್ಮ ಪಕ್ಷದ ಚಿಹ್ನೆ ಗಡಿಯಾರಕ್ಕೆ ಮತ ಹಾಕಿ, ನಂತರ ಏ.24ರಂದು ಮುಂಬೈಗೆ ಬಂದು ಮತ್ತೆ ನಮ್ಮ ಪಕ್ಷಕ್ಕೇ ಮತ ಚಲಾಯಿಸಿ
-ಅಂದ ಹಾಗೆ ಸತಾರಾದಲ್ಲಿ ಮತ ಹಾಕಿ ಬಂದ ಮೇಲೆ ನಿಮ್ಮ ಬೆರಳಿನ ಶಾಯಿ ಅಳಿಸಲು ಮರೆಯದಿರಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.