ಪ್ರಧಾನ ಸುದ್ದಿ

ಮೋದಿ ನರಭಕ್ಷಕ ವಿವಾದಕ್ಕೆತುಪ್ಪ

ಮೋದಿ ನರಭಕ್ಷಕ ವಿವಾದಕ್ಕೆತುಪ್ಪ
Published On :

ಬೆಂಗಳೂರು/ಎಚ್.ಡಿ.ಕೋಟೆ:
'ನರೇಂದ್ರ ಮೋದಿ ನರಭಕ್ಷಕ', 'ಮಹಾತ್ಮಾ ಗಾಂಧಿ ಕೊಂದ ಆರ್‌ಎಸ್‌ಎಸ್‌ನ ಹಾರ್ಡ್‌ಕೋರ್ ಸದಸ್ಯ'... ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಧ್ರುವನಾರಾಯಣ ಮತ್ತು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಕುರಿತ ವಿವಾದಕ್ಕೆ ಮತ್ತೆ ತುಪ್ಪ ಸುರಿದರು.
ಈಗಾಗಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಇಂಥವೇ ಹೇಳಿಕೆ ನೀಡಿ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರದೇ ಸಾಲುಗಳ ಮುಂದುವರಿದ ಭಾಗದಂತೆ ಈ ಹೇಳಿಕೆಗಳು ಹೊರಬಂದಿವೆ.
ರಾಜ್ಯದಲ್ಲಿ ಮೋದಿ ಅಲೆ ನಡೆಯಲ್ಲ, ಅಲೆ ಇದೆ ಅನ್ನೋದು ಕೇವಲ ವಿದ್ಯುನ್ಮಾನ ಮಾಧ್ಯಮಗಳ ಸೃಷ್ಟಿಯಷ್ಟೇ. ಕಳೆದ 1 ವರ್ಷದಿಂದ ಇದಕ್ಕಾಗಿ 100 ಕೋಟಿ ವೆಚ್ಚ ಮಾಡಿದ್ದಾರೆ. ಮೋದಿ ಬಳಿ ಟನ್‌ಗಟ್ಟಲೆ ಹಣವಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಮನುಷ್ಯರನ್ನು ಜೀವಂತವಾಗಿ ಸುಟ್ಟವರು ಮೋದಿಯೇ ಎಂದು ಮಾತಿನ ಚಾಟಿ ಬೀಸಿದರು.
ಆರ್‌ಎಸ್‌ಎಸ್ ಮೋದಿಯನ್ನು ಪ್ರಧಾನಿ ಮಾಡಲು ಹೊರಟಿದೆ. ಆದರೆ ಇದಕ್ಕೆ ಅಲ್ಪಸಂಖ್ಯಾತರು ಮತ್ತು ಬಡವರ ಬಗ್ಗೆ ಆಸ್ಥೆ ಇಲ್ಲ. ಹಿಂದುಳಿದವರಿಗೆ ಮೀಸಲಾತಿ ನೀಡಬಾರದು ಎಂದು ವಾದಿಸಿದ್ದವರೂ ಬಿಜೆಪಿಯವರೇ ಎಂದು ತರಾಟೆಗೆ ತೆಗೆದುಕೊಂಡರು.  
ಬಿಜೆಪಿ ಏನೂ ಮಾಡಿಲ್ಲ
ಕಾಂಗ್ರೆಸ್ ನೇತೃತ್ವದ ಯುಪಿಎ ಹಲವಾರು ಜನಪರ ಯೋಜನೆ ಜಾರಿಗೆ ತಂದಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಧಿಕಾರಾವಧಿಯಲ್ಲಿ ಏನು ಮಾಡಿತ್ತು ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನ ಹಾರ್ಡ್‌ಕೋರ್ ಸದಸ್ಯರಾಗಿರುವ ನರೇಂದ್ರ ಮೋದಿ ಎಂದಿಗೂ ಈ ದೇಶದ ಪ್ರಧಾನಿಯಾಗಲಾರರು. ಆರ್‌ಎಸ್‌ಎಸ್‌ಗೆ ನಾಥೂರಾಮ್ ಗೋಡ್ಸೆಯೇ ಆರಾಧ್ಯ ದೈವ. ನನ್ನ ಅಪ್ಪನಾಣೆ ಮೋದಿ ಈ ದೇಶದ ಪ್ರಧಾನಿಯಾಗಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.