ಪ್ರಧಾನ ಸುದ್ದಿ

ವಿಮಾನ ಪತನ

ವಿಮಾನ ಪತನ
Published On :

ನವದೆಹಲಿ/ಜೈಪುರ: ಅಮೆರಿಕದಿಂದ ಹೊಸದಾಗಿ ಖರೀದಿಸಿದ್ದ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಶೇಷ ಕಾರ್ಯಾಚರಣೆ ವಿಮಾನ ಶುಕ್ರವಾರ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಆಗ್ರಾ ವಾಯು ನೆಲೆಯಿಂದ ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲೇ ಗ್ವಾಲಿಯರ್ ವಾಯುನೆಲೆಗಿಂತ 72 ಮೈಲು ದೂರದಲ್ಲಿ ವಿಮಾನ ಪತನಗೊಂಡಿದೆ. ಮೃತರಲ್ಲಿ ಇಬ್ಬರು ವಿಂಗ್ ಕಮಾಂಡರ್‌ಗಳು, ಇಬ್ಬರು ಸ್ಕ್ವಾಡ್ರನ್ ಲೀಡರ್‌ಗಳು ಹಾಗೂ ಒಬ್ಬ ಸಿಬ್ಬಂದಿ ಸೇರಿದ್ದಾರೆ. ಈ ಬಗ್ಗೆ ತನಿಖೆಗೆ ಸಮಿತಿ ರಚಿಸಿರುವುದಾಗಿ ಐಎಎಫ್ ವಕ್ತಾರರು ತಿಳಿಸಿದ್ದಾರೆ.
6 ಸಾವಿರ ಕೋಟಿ: ಬರೋಬ್ಬರಿ 6 ಸಾವಿರ ಕೋಟಿ ನೀಡಿ 3 ವರ್ಷಗಳ ಹಿಂದಷ್ಟೇ ಅಮೆರಿಕದಿಂದ 6 ಸೂಪರ್ ಹರ್ಕ್ಯುಲಸ್ ವಿಮಾನ ಖರೀದಿಸಲಾಗಿತ್ತು. ಈ ವಿಮಾನವು 20 ಟನ್‌ಗಳಷ್ಟು ಸರಕು ಸಾಗಣೆ ಹಾಗೂ ಅತಿ ಚಿಕ್ಕ ರನ್‌ವೇಯಲ್ಲೂ ಟೇಕ್ ಆಫ್ ಆಗುವ ವಿಶೇಷ ಸಾಮರ್ಥ್ಯ ಹೊಂದಿದೆ. ಇತ್ತೀಚೆಗಷ್ಟೇ ಚೀನಾ ಗಡಿಯ ದೌಲತ್ ಬೇಗ್ ಓಲ್ಡಿಯ ಎತ್ತರದ ವಾಯುನೆಲೆಯಲ್ಲಿ ಈ ವಿಮಾನವನ್ನು ನಿಯೋಜಿಸಲಾಗಿತ್ತು. ಮಲೇಷ್ಯಾ ವಿಮಾನದ ಶೋಧ ಕಾರ್ಯಕ್ಕೂ ಈ ವಿಶೇಷ ಕಾರ್ಯಾಚರಣೆಯ ವಿಮಾನವನ್ನು ಬಳಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.