ಮಳೆ ಅವಘಡ ಸಿಡಿಲಿಗೆ 5 ಬಲಿ
ಹುಬ್ಬಳ್ಳಿ/ಕೆ.ಆರ್.ನಗರ/ ರಾಯಬಾಗ ಉತ್ತರ ಕರ್ನಾಟಕ ಭಾಗದಲ್ಲಿ ಮೂವರು ಹಾಗೂ ಕೆ.ಆರ್.ನಗರದಲ್ಲಿ ಹಾಗೂ ರಾಯಬಾಗದಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ಸಮೀಪದ ಬೆನ್ನೂರು ಕ್ಯಾಂಪ್ ಬಳಿ ಸಿಡಿಲು ಹೊಡೆದು ವೃದೆ ್ಧಚಾಂದ್‌ಬಿ ಇಬ್ರಾಹಿಂ(60) ಹಾಗೂ ಬಾಲಕಿ ಅನುಜಾ ಬೇಗಂ(2) ಮೃತಪಟ್ಟಿದ್ದಾರೆ. ಅನುಜಾ ಜತೆ ಆಡುತ್ತಿದ್ದ ಮೂವರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ನಿವಾಸಿ ಗೆಜ್ಜಳ್ಳಿ ದೊಡ್ಡ ತಾಯಮ್ಮ(38) ಶನಿವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇವರು ತನ್ನ ಮಗ ಮಾರೇಶ(9)ನ ಜತೆಗೆ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುವ ಮಾರ್ಗದಲ್ಲಿ ಲಂಕಪ್ಪನ ಗುಡಿ ಹತ್ತಿರ ಮಧ್ಯಾಹ್ನ 3.30ರ ಸುಮಾರಿಗೆ ಸಿಡಿಲು ಹೊಡೆದಿದೆ. ಸಿರಿಗೇರಿ ಹೋಬಳಿ ವ್ಯಾಪ್ತಿಯ ಗುಂಡಿಗನೂರು ಕ್ಯಾಂಪಿನಲ್ಲಿ 3 ಎತ್ತುಗಳು, ಶ್ಯಾನವಾಸಪುರ ಗ್ರಾಮದಲ್ಲಿ 2 ಆಕಳು ಸಾವನ್ನಪ್ಪಿವೆ. ತಾಲೂಕಿನಲ್ಲಿ ಬಿರುಗಾಳಿಗೆ 25 ಗುಡಿಸಲುಗಳ ಚಾವಣಿ ನೆಲಸಮಗೊಂಡಿದೆ.
ಕೆ.ಆರ್. ನಗರ: ಜಮೀನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಶನಿವಾರ ಜರುಗಿದೆ. ಸಾಲಿಗ್ರಾಮದ ಕಾಲುವೆ ಬೀದಿಯ ಲಕ್ಷ್ಮಮ್ಮ (65) ಮೃತರು. ಚುಂಚನಕಟ್ಟೆ ಸಮೀಪದಲ್ಲಿರುವ ರಾಜೇಗೌಡರ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ರಾಂುಬಾಗ: ತಾಲೂಕಿನಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಮುರುಗೆಪ್ಪ ಅಥಣಿ(26) ಮೃತರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

