ಪ್ರಧಾನ ಸುದ್ದಿ

ಬಸ್ಸಿನ ಪ್ರಯಾಣ ನಿರೀಕ್ಷಿತ ದುಬಾರಿ

ಬಸ್ಸಿನ ಪ್ರಯಾಣ ನಿರೀಕ್ಷಿತ ದುಬಾರಿ
Published On :

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಮೇ 3
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿರೀಕ್ಷೆಯಂತೆ ಶೇ.7.96ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದೆ. ಶನಿವಾರ ತಡರಾತ್ರಿಯಿಂದಲೇ ಜಾರಿಗೆ ಬರುವಂತೆ ಈ ಆದೇಶ ಮಾಡಲಾಗಿದೆ. ರಜೆ ಕಾರಣ ಏಪ್ರಿಲ್ ಆರಂಭದಲ್ಲಿಯೇ ವೋಲ್ವೋ, ರಾಜಹಂಸ ಬಸ್ ದರ ಹೆಚ್ಚಳ ಮಾಡಿರುವುದರಿಂದ  ಈಗ ಪರಿಷ್ಕರಣೆ ಮಾಡಿಲ್ಲ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜೂನ್‌ನಲ್ಲಿ ದರ ಇಳಿಕೆ ವೇಳೆ ಶೇ.7.96ರ ಲೆಕ್ಕ ಇರಿಸಿಕೊಂಡೇ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಹಿಂದಿನ ದರ ಪರಿಷ್ಕರಣೆ ಬಳಿಕ ಪ್ರತಿ ಲೀಟರ್ ಡೀಸೆಲ್‌ಗೆ 7.21 ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಸಮಜಾಯಿಷಿ ನೀಡಿದೆ.

ಪರಿಷ್ಕೃತ ದರಪಟ್ಟಿ
ಬೆಂಗಳೂರಿನಿಂದ     ಹಳೆಯ ದರ     ಪರಿಷ್ಕೃತ ದರ
*    ಮೈಸೂರು    120    132
*    ಮಂಗಳೂರು    307    332
*    ಹುಬ್ಬಳ್ಳಿ    356    385
*    ಮಂಡ್ಯ    83    90
*    ಧಾರವಾಡ    373    403
*    ಗುಲ್ಬರ್ಗ    548    592
*    ಬಳ್ಳಾರಿ    275    296
*    ದಾವಣಗೆರೆ    230    249
*    ಶಿವಮೊಗ್ಗ    247    267
*    ಬೆಳಗಾವಿ    439    474

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.