ಇವತ್ತು ಮುಗಿದರೆ ಮುಗೀತು ಚುನಾವಣೆ

ನವದೆಹಲಿ: ಲೋಕಸಭೆಯ ಮ್ಯಾರಥಾನ್ ಚುನಾವಣೆಯ 9ನೇ ಹಾಗೂ ಕೊನೆಯ ಹಂತದ ಮತದಾನ ಸೋಮವಾರ ನಡೆಯಲಿದೆ. ಮೂರು ರಾಜ್ಯಗಳ 41 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ದೀರ್ಘ ಚುನಾವಣೆ ಪ್ರಕ್ರಿಯೆಗೆ ತೆರೆಬೀಳಲಿದೆ. ಈ ಮೂಲಕ ದೇಶಾದ್ಯಂತ ಕಳೆದ 35 ದಿನಗಳಿಂದಲೂ ನಡೆಯುತ್ತಿದ್ದ ರ್ಯಾಲಿ, ಭಾಷಣ, ವಾಗ್ಯುದ್ಧ, ಭರಾಟೆಗಳೆಲ್ಲ ಸ್ತಬ್ಧವಾಗಲಿದೆ.
ವಾರಾಣಸಿಯತ್ತ ಕಣ್ಣು
ಕೊನೆಯ ಹಂತದಲ್ಲಿ 3 ರಾಜ್ಯಗಳ 41 ಸ್ಥಾನಗಳಿಗೆ ಮತದಾನ ನಡೆಯಲಿದ್ದರೂ ಎಲ್ಲರ ಕಣ್ಣು ನೆಟ್ಟಿರುವುದು ವಾರಾಣಸಿಯತ್ತ. ಅಲ್ಲಿ ರಾಜಕೀಯ ಘಟಾನುಘಟಿಗಳಾದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಅಜಯ್ ರಾಯ್ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದೇಗುಲ ನಗರಿಯಲ್ಲಿ ಗೆಲವಿನ ಪತಾಕೆಯನ್ನು ಯಾರು ಹಾರಿಸುತ್ತಾರೆ ಎಂಬುದೇ ಸದ್ಯದ ಕುತೂಹಲ.
2,500 ನರೇಂದ್ರರು
ಸೋಮವಾರ ಸುಮಾರು 2,500 ನರೇಂದ್ರರು, 3,600 ಅರವಿಂದರು ಮತ ಹಕ್ಕು ಚಲಾಯಿಸಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಆಪ್, ಎಸ್ಪಿ ಮತ್ತಿತರ ಪಕ್ಷಗಳ ಅಭ್ಯರ್ಥಿ ಹೆಸರನ್ನೇ ಹೋಲುವವರು ಸಾವಿರಾರು ಮಂದಿ. ಕೆಲವರ ಮೊದಲ ಹೆಸರು ಮಾತ್ರ ಅಭ್ಯರ್ಥಿಗಳ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ನರೇಂದ್ರ ಹೆಸರಿನ 2,500 ಮಂದಿ, ಅರವಿಂದ ಹೆಸರಿನ 3,600, ಅಜಯ್ ಹೆಸರಿನ 16,000 ಮತದಾರರಿದ್ದಾರೆ. ವಾರಾಣಸಿಯಲ್ಲಿ ನರೇಂದ್ರ ಹೆಸರಿನ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರೆಂದರೆ, ಬಿಜೆಪಿಯ ನರೇಂದ್ರ ಮೋದಿ, ಜನಶಕ್ತಿ ಏಕ್ತಾ ಪಕ್ಷದ ನರೇಂದ್ರನಾಥ್ ದುಬೇ ಅಡಿಗ್, ಪಕ್ಷೇತರ ಅಭ್ಯರ್ಥಿ ನರೇಂದ್ರ ಬಹಾದೂರ್ ಸಿಂಗ್.
ಹಂಚಿದ ಹೆಗ್ಗಳಿಕೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರ ಪಾತ್ರವಾಗಿತ್ತು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಈ ಹೆಗ್ಗಳಿಕೆಯನ್ನು ಎರಡು ಕ್ಷೇತ್ರಗಳು ಹಂಚಿಕೊಂಡಿವೆ. ಅವೆಂದರೆ, ಚೆನ್ನೈ ದಕ್ಷಿಣ ಮತ್ತು ವಾರಾಣಸಿ. ಈ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂದರೆ 42 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 2009ರಲ್ಲಿ ಚೆನ್ನೈ ದಕ್ಷಿಣದಲ್ಲಿ 43 ಅಭ್ಯರ್ಥಿಗಳು ಕಣದಲ್ಲಿದ್ದರೆ, 2004ರಲ್ಲಿ 35 ಮಂದಿ ಸ್ಪರ್ಧಿಸಿದ್ದರು.
ಪ್ರಮುಖರು
ನರೇಂದ್ರ ಮೋದಿ
ಅಜಯ್ ರಾಯ್
ಅರವಿಂದ ಕೇಜ್ರಿವಾಲ್
ಮುಲಾಯಂ ಸಿಂಗ್ ಯಾದವ್
ಅಧಿರ್ ರಂಜನ್ ಚೌಧರಿಜಗದಂಬಿಕಾ ಪಾಲ್ ಆರ್.ಪಿ.ಎನ್. ಸಿಂಗ್
ಉತ್ತರಪ್ರದೇಶ-18
ಪ. ಬಂಗಾಳ-17
ಬಿಹಾರ- 06
9ನೇ (ಕೊನೇ)ಹಂತ
3 ರಾಜ್ಯಗಳು
41 ಸ್ಥಾನಗಳು
9 ಕೋಟಿ ಒಟ್ಟು ಮತದಾರರು
606 ಕಣದಲ್ಲಿರುವ ಅಭ್ಯರ್ಥಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


