ಅಂಚೆಯಣ್ಣನ ಮಗಳು ರಾಜ್ಯಕ್ಕೆ 5ನೇ ರ್ಯಾಂಕ್
ಬಾಗಲಕೋಟೆ: ಮನೆ ಮನೆಗೆ ಅಂಚೆ ಕಾಗದ ತಲುಪಿಸಿ ನೋವು ನಲಿವುಗಳ ವಿನಿಮಯ ಮಾಡುವ ಕೈಂಕರ್ಯದಲ್ಲಿ ತೊಡಗಿದ್ದ ಅಂಚೆಯಣ್ಣನ ಮಗಳು ಲಕ್ಷ್ಮಿ ಶಿವಲಿಂಗಪ್ಪ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ. ಒಟ್ಟು 625 ಅಂಕಗಳಿಗೆ 613 ಅಂಕ ಪಡೆದಿರುವ ಲಕ್ಷ್ಮಿ, ಕನ್ನಡದಲ್ಲಿ 124, ಇಂಗ್ಲಿಷ್ 99, ಹಿಂದಿ 99, ಗಣಿತ 100, ಸಮಾಜ ವಿಜ್ಞಾನ 99, ವಿಜ್ಞಾನ ವಿಷಯದಲ್ಲಿ 92 ಅಂಕ ಪಡೆದು ಸಾಧನೆ ಮೆರೆದಿದ್ದಾಳೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಲಕ್ಷ್ಮಿ ಶಿವಲಿಂಗಪ್ಪ ತಾಯಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಮಗಳ ಸಾಧನೆಗೆ ಪಾಲಕರು ಹರ್ಷಗೊಂಡಿದ್ದಾರೆ. ತಾಲೂಕಿನ ಹಿಪ್ಪರಗಿ ಮೊರಾರ್ಜಿ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮಗಳ ಸಾಧನೆಗೆ ಮಾತುಗಳೇ ಬರುತ್ತಿಲ್ಲ, ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಅಷ್ಟೊಂದು ಖುಷಿಯಾಗಿದೆ ಎಂದು 'ಕನ್ನಡಪ್ರಭ'ದೊಂದಿಗೆ ತಂದೆ ಶಿವಲಿಂಗಪ್ಪ ಸಂತಸ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

