ಇಂದು ನಿರ್ಧಾರವಾಗುತ್ತೆ ಹೊಸ ಸರ್ಕಾರ

ನವದೆಹಲಿ: ಹೊಸ ಸರ್ಕಾರ ಯಾರದ್ದು, ಯಾವ ಮೈತ್ರಿಕೂಟ ಬಹುಮತದಿಂದ ಗೆಲ್ಲುತ್ತದೆ, ಕುತೂಹಲಕ್ಕೆ ಕಾರಣವಾಗಿರುವ ವಾರಾಣಸಿ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಈ ಬಗ್ಗೆ ಉತ್ತರ ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ. ಹೌದು. ದೇಶದ 989 ಕೇಂದ್ರಗಳಲ್ಲಿ ಸುಮಾರು 8 ಸಾವಿರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿರುವ ಇವಿಎಂಗಳನ್ನು ತೆರೆದು ಮತ ಎಣಿಸಲಾಗುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದ ಈ ಪ್ರಕ್ರಿಯೆ ಆರಂಭವಾಗಿದೆ. ಸಂಜೆ ನಾಲ್ಕು ಗಂಟೆಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಈ ಮೂಲಕ 69 ದಿನಗಳ ರಾಜಕೀಯ ಹೋರಾಟಕ್ಕೆ ಶುಕ್ರವಾರ ತೆರೆ ಬೀಳಲಿದೆ. ಒಂಬತ್ತು ಹಂತಗಳಲ್ಲಿ ನಡೆದ ಚುನಾವಣೆ ದೇಶದ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಪ್ರಕ್ರಿಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಳಗ್ಗೆ 9.30ಕ್ಕೆ ಮೊದಲ ಚಿತ್ರಣ
ಎಂಟು ಗಂಟೆಯಿಂದ ಮತದಾನ ಆರಂಭವಾಗಿರುವುದರಿಂದ ಬೆಳಗ್ಗೆ 9.30 ಮೊದಲ ಮುನ್ನಡೆ ಲಭ್ಯವಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಸಾಮಾಜಿಕ ಜಾಲ ತಾಣಗಳು
ಪ್ರಸಕ್ತ ಸಾಲಿನ ಚುನಾವಣೆಯ ವಿಶೇಷವೇನೆಂದರೆ ಸಾಮಾಜಿಕಜಾಲ ತಾಣಗಳಾದ ಫೇಸ್ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆಂದೇ ಪ್ರತ್ಯೇಕ ಮತ್ತು ಸಮರ್ಥರ ತಂಡಗಳನ್ನೇ ರಚಿಸಿದ್ದವು.
ದಾಖಲೆಯ ಮತದಾನ
66.38%
ಇದು ಮಹಾಚುನಾವಣೆಗಳಲ್ಲೇ ದಾಖಲೆ
ರು. 331 ಕೋಟಿ ವಶಕ್ಕೆ
ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಎಂದು ಎಷ್ಟೇ ಹೇಳಿಕೊಳ್ಳುತ್ತಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ಬರೋಬ್ಬರಿ 331 ಕೋಟಿ ವಶಪಡಿಸಲಾಗಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ.
ಯಾರು ಪ್ರಮುಖರು
ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುಷ್ಮಾ ಸ್ವರಾಜ್, ಲಾಲ್ಕೃಷ್ಣ ಆಡ್ವಾಣಿ ಸೇರಿದಂತೆ 8 ಸಾವಿರ ಅಭ್ಯರ್ಥಿಗಳು
ಹೇಳಿಕೆಗಳ ಸಮರ
ಲೋಕಸಮರದಲ್ಲಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಾಗಿಯೇ ವೈಯಕ್ತಿಕ ಮಾತಿನ ಹೇಳಿಕೆ ವ್ಯಕ್ತವಾಯಿತು. ಶೆಹಜಾದಾ, 'ವಿಷಬೀಜ ಬಿತ್ತುವುದು' 'ಮಂಗ' 'ದೊಡ್ಡ ಗೂಂಡಾ' ಎಂಬಂಥ ಹೇಳಿಕೆಗಳು ರಾಜಕೀಯ ನಾಯಕರ ಬಾಯಿಯಿಂದ ಹೊರಬಿದ್ದವು.
ಈ ಚುನಾವಣೆ ವಿಶೇಷ ಏನು?
ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ 'ನನ್ ಆಫ್ ದ ಎಬವ್' (ಈ ಮೇಲಿನ ಯಾರೂ ಅಲ್ಲ) ಎಂಬ ಆಯ್ಕೆಯನ್ನು ನೀಡಿದೆ.
ಬರೋಬ್ಬರಿ ಬಂದೋಬಸ್ತ್
ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಸೇರಿ 5,50,000 ಮಂದಿ ಭದ್ರತಾ ಸಿಬ್ಬಂದಿಯನ್ನು ಏರ್ಪಾಡು ಮಾಡಿದೆ.
ಎಲ್ಲೆಲ್ಲಿ ಎಣಿಕೆ?
ಚಿಕ್ಕೋಡಿ
ಸಿಟಿಇ ಸೊಸೈಟಿ, ಆರ್ಡಿ ಕಾಲೇಜು,
ಬಸ್ ನಿಲ್ದಾಣ ಎದುರು, ಮುಧೋಳ- ನಿಪ್ಪಾಣಿ ರಸ್ತೆ. ಚಿಕ್ಕೋಡಿ
ಬೆಳಗಾವಿ
ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಲ
ಬಾವೋರಾವ್ ಕಾಕತ್ಕರ್ ಕಾಲೇಜು
ಜ್ಯೋತಿ ಕಾಂಪೌಂಡ್ ಕ್ಲಬ್ ರಸ್ತೆ, ಬೆಳಗಾವಿ
ಬಾಗಲಕೋಟೆ
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು,
ವಿದ್ಯಾಗಿರಿ, ಬಾಗಲಕೋಟೆ
ಬಾಗಲಕೋಟೆ
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು,
ವಿದ್ಯಾಗಿರಿ, ಬಾಗಲಕೋಟೆ
ಬಿಜಾಪುರ
ಸೈನಿಕ್ ಶಾಲಾ ಕ್ಯಾಂಪಸ್, ಅಥಣಿ ರಸ್ತೆ, ಬಿಜಾಪುರ
ಗುಲ್ಬರ್ಗ
ಗುಲ್ಬರ್ಗ ವಿಶ್ವವಿದ್ಯಾಲಯ, ಸೇಡಂ ರಸ್ತೆ, ಗುಲ್ಬರ್ಗಾ
ರಾಯಚೂರು
ಎಸ್ಆರ್ಪಿಎಸ್ ಕಾಲೇಜು,
ಮಾಣಿಕ್ ಪ್ರಭು ದೇವಸ್ಥಾನ ರಸ್ತೆ, ರಾಯಚೂರು
ಬೀದರ್
ಬಿವಿಬಿ ಕಾಲೇಜು, ಮತ್ತು
ಬಸವೇಶ್ವರ ಬಿಎಡ್ ಕಾಲೇಜು,
ಮಾನಹಳ್ಳಿ ರಸ್ತೆ, ಬೀದರ್
ಕೊಪ್ಪಳ
ಶ್ರೀ ಗವಿ ಸಿದ್ದೇಶ್ವರ ಪದವಿ ಕಾಲೇಜು,
ಗವಿ ಮಠದ ಹತ್ತಿರ, ಕೊಪ್ಪಳ
ಬಳ್ಳಾರಿ
ರಾವ್ಬಹುದ್ದೂರ್ ಎಲ್.ಮಹಾಬಲೇಶ್ವರಪ್ಪ
ಎಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ರಸ್ತೆ, ಬಳ್ಳಾರಿ
ಹಾವೇರಿ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ದೇವಗಿರಿ, ಹಾವೇರಿ
ಧಾರವಾಡ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಎತ್ತಿನಗುಡ್ಡ, ಧಾರವಾಡ
ಉತ್ತರಕನ್ನಡ
ಡಾ.ಎ.ವಿ.ಬಾಳಿಗ ಕಾಲೇಜು, ಹೆಗಡೆ ರಸ್ತೆ, ಕುಮಟ
ದಾವಣಗೆರೆ
ಸರ್ಕಾರಿ ಯುಬಿಡಿಟಿ ಎಂಜಿನಿಯರಿಂಗ್
ಕಾಲೇಜು, ಹದಡಿ ರಸ್ತೆ, ದಾವಣಗೆರೆ
ಶಿವಮೊಗ್ಗ
ಎಸ್.ಆರ್.ನಾಗಪ್ಪಶೆಟ್ಟಿ ಕಾಲೇಜು,
ನ್ಯಾಷನಲ್ ಪಿಯು ಕಾಲೇಜು,
ಎನ್ಇಎಸ್ ಕ್ಯಾಂಪಸ್, ಶಿವಮೊಗ್ಗ
ಉಡುಪಿಚಿಕ್ಕಮಗಳೂರು
ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ, ಕುಂಜಿಬೆಟ್ಟು, ಉಡುಪಿ
ಹಾಸನ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು,
ಡೈರಿ ಸರ್ಕಲ್, ಬಿ.ಎಂ.ರಸ್ತೆ, ಹಾಸನ
ದಕ್ಷಿಣ ಕನ್ನಡ
ಮಹಾತ್ಮಗಾಂಧಿ ಸೆಂಟಿನರಿ ಪಿ.ಯು. ಕಾಲೇಜು, ಬೊಂದೆಲ್, ಮಂಗಳೂರು
ಚಿತ್ರದುರ್ಗ
ಸರ್ಕಾರಿ ಕಲಾ ಕಾಲೇಜು, ಬಾಲಕರ ಪಿ.ಯು. ಕಾಲೇಜು, ಚಿತ್ರದುರ್ಗ
ತುಮಕೂರು
ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು
ಮಂಡ್ಯ
ಸರ್ಕಾರಿ ಸ್ವಾಯತ್ತ ಕಾಲೇಜು, ಮಂಡ್ಯ
ಮೈಸೂರು
ಜಯಚಾಮರಾಜೇಂದ್ರ ಎಂಜಿನಿಯರಿಂಗ್
ಕಾಲೇಜು, ಗೋಲ್ಡನ್ ಜ್ಯೂಬಿಲಿ ಭವನ, ಮೈಸೂರು
ಚಾಮರಾಜನಗರ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮರಿಯಾಲ
ಬೆಂ.ಗ್ರಾಮಾಂತರ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು,
ಬೆಂಗಳೂರು-ಮೈಸೂರು ರಸ್ತೆ, ಜಾನಪದ ಲೋಕ ಸಮೀಪ, ರಾಮನಗರ
ಬೆಂಗಳೂರು ಉತ್ತರ
ವಿಎಚ್ಡಿ ಹೋಮ್ಸೈನ್ಸ್ ಕಾಲೇಜು, ಶೇಷಾದ್ರಿ ರಸ್ತೆ, ಬೆಂಗಳೂರು
ಬೆಂಗಳೂರು ಕೇಂದ್ರ
ಸರ್ಕಾರಿ ಆರ್.ಸಿ.ಕಾಲೇಜು, ಶೇಷಾದ್ರಿ ರಸ್ತೆ, ಬೆಂಗಳೂರು
ಬೆಂಗಳೂರು ದಕ್ಷಿಣ
ಎಸ್ಎಸ್ಎಂಆರ್ವಿ ಪಿಯು ಕಾಲೇಜು,
36ನೇ ಕ್ರಾಸ್, 26ನೇ ಮೇನ್, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು
ಚಿಕ್ಕಬಳ್ಳಾಪುರ
ನಾಗರಾರ್ಜುನ ಎಂಜಿನಿಯರಿಂಗ್ ಕಾಲೇಜು,
ಬೀದಿಗನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು
ಕೋಲಾರ
ಸರ್ಕಾರಿ ಬಾಲಕರು ಪ್ರಥಮ ದರ್ಜೆ ಕಾಲೇಜು,
ಗೌರಿಪೇಟೆ, ಬಿಬಿ ರಸ್ತೆ, ಕೋಲಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


