ಬಿಗ್ಬಿ, ರಜನಿ, ಸಲ್ಮಾನ್ಗೆ ಆಹ್ವಾನ
ನವದೆಹಲಿ: ಸೋಮವಾರ ನಡೆಯಲಿರುವ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸಾರ್ಕ್ ನಾಯಕರ ಜತೆಗೆ ಬಾಲಿವುಡ್ ಗಣ್ಯರೂ ಹಾಜರಿರಲಿದ್ದಾರೆ. ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಸಲ್ಮಾನ್ಖಾನ್, ಜನಪ್ರಿಯ ಹಿನ್ನಲೆ ಗಾಯಕಿ ಲತಾ ಮಂಗೇಷ್ಕರ್, ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಆಹ್ವಾನ ನೀಡಲಾಗಿದೆ. ಅವರೆಲ್ಲರೂ 2,500 ಗಣ್ಯರ ಪಟ್ಟಿಯಲ್ಲಿದ್ದಾರೆ. ಇವರ ಜತೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸಂಸತ್ ಸದಸ್ಯರಿಗೂ ಆಹ್ವಾನ ನೀಡಲಾಗಿದೆ.
ಬಿಗ್ಬಿ, ರಜನಿ ಆಪ್ತರು: ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಜ ರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿ ಬಾಲಿವುಡ್ ಸೂಪರ್ನಟ ಅಮಿತಾಭ್ ಬಚ್ಚನ್ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುಸೂಪರ್ ರಜನಿಕಾಂತ್ ಕೂಡ ಮೋದಿ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚೆನ್ನೈನಲ್ಲಿ ಮೋದಿ, ರಜನೀಕಾಂತ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಬಿಜೆಪಿ ವತಿಯಿಂದ 1,250: ಬಿಜೆಪಿ ವತಿಯಿಂದ ಅತಿಥಿಗಳ ಪಟ್ಟಿಯನ್ನು 1,250ಕ್ಕೆ ಮಿತಿಗೊಳಿಸಿದೆ.
ಇನ್ನುಳಿದ 1,250 ಮಂದಿ ಅತಿಥಿಗಳಿಗೆ ರಾಷ್ಟ್ರಪತಿಯವರ ವತಿಯಿಂದ ಆಹ್ವಾನ ಕಳುಹಿಸಲಾಗಿದೆ. ನಿಯೋಜಿತ ಪ್ರಧಾನಿ ತಮಗೆ ಬೇಕಾದ 20 ಮಂದಿಗೆ ಆಹ್ವಾನ ಕಳುಹಿಸಲು ಅವಕಾಶ ಉಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

