ಪ್ರಧಾನ ಸುದ್ದಿ

ಕೃಷ್ಣ, ಅಂಬಿ ಬಣಗಳ ತಿಕ್ಕಾಟಕ್ಕೆ ಬಲಿಯಾದೆ

ಕೃಷ್ಣ, ಅಂಬಿ ಬಣಗಳ ತಿಕ್ಕಾಟಕ್ಕೆ ಬಲಿಯಾದೆ
Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಡ್ಯ  24

ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಮಾಜಿ ಸಂಸದೆ ರಮ್ಯಾ ಕೊನೆಗೂ ತಮ್ಮ ಅಸಮಾಧಾನ ಹೊರಗೆಡವಿದ್ದಾರೆ.
'ಮಂಡ್ಯ ಜಿಲ್ಲಾ ಕಾಂಗ್ರೆಸ್‌ನ ಬಹುತೇಕ ನಾಯಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ನನ್ನ ಸೋಲಿಗೆ ಇಂತಹ ನಾಯಕರೇ ನೇರ ಹೊಣೆ' ಎಂದು ಮೇ 19ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಗೆ ನೀಡಿರುವ ವರದಿಯಲ್ಲಿ ರಮ್ಯಾ ಹೇಳಿದ್ದಾರೆ. ಈ ಸಂಗತಿ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡುವಾಗ ರಮ್ಯಾರಿಂದ ಆಗಿರುವ ಅನೇಕ ಅಚಾತುರ್ಯಗಳು ಗೊಂದಲಗಳಿಗೆ ಕಾರಣವಾಗಿದ್ದವು. ಮಾಜಿ ಸಂಸದೆ ರಮ್ಯಾ ರಾಜಕಾರಣದಲ್ಲಿ ಇನ್ನೂ ಅಂಬೇಗಾಲು ಇಡುತ್ತಿದ್ದಾರೆ. ಕೆಲ ತಪ್ಪುಮಾಡಬಹುದು. ಸುಧಾರಿಸಿಕೊಂಡು ಹೋಗೋಣ ಎಂದು ಸಮಾಧಾನದ ಮಾತುಗಳನ್ನು ಹೇಳುತ್ತಿದ್ದ ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧವೇ ತಿರುಗಿ ಬಿದ್ದು, ಎಐಸಿಸಿಗೆ ದೂರು ನೀಡಿರುವ ರಮ್ಯಾ ಜಿಲ್ಲಾ ಕಾಂಗ್ರೆಸ್‌ನಲ್ಲಂತೂ ತಲ್ಲಣ ಮೂಡಿಸಿದ್ದಾರೆ.
ಕುತಂತ್ರ ಕಾರಣ: ಮೈಸೂರಿನ ಮಾಜಿ ಸಂಸದ ಎಚ್. ವಿಶ್ವನಾಥ್ ಅವರಂಥ ಹಿರಿಯ ರಾಜಕಾರಣಿಗಳೂ ತಮ್ಮ ಸೋಲಿಗೆ ಯಾರನ್ನೂ ಬೊಟ್ಟು ಮಾಡದೇ ಕೆಲವು ನಾಯಕರು ನಡೆಸಿದ ಕುತಂತ್ರವೇ ಕಾರಣ ಎಂದು ಸೂಚ್ಯವಾಗಿ ಹೇಳಿ ಜಾರಿಕೊಂಡಿದ್ದಾರೆ. ಆದರೆ ರಮ್ಯಾ ಮಾತ್ರ ನೇರವಾಗಿ ನನ್ನ ಸೋಲಿಗೆ ಕೃಷ್ಣ- ಅಂಬಿ ಬಣಗಳ ಒಣ ಪ್ರತಿಷ್ಠೆ, ಗೊಂದಲ ಮೂಡಿಸುವ ಹೇಳಿಕೆಗಳು, ಕೆಳ ಹಂತದ ನಾಯಕರ ನಿರ್ಲಕ್ಷ್ಯ ಧೋರಣೆಗಳೇ ಕಾರಣ ಎಂದು ನೇರವಾಗಿ ದೂರಿನಲ್ಲಿ ಹೇಳಿ ದಾರ್ಷ್ಟ್ರ್ಯ ಮೆರೆದಿದ್ದಾರೆ. ರಾಹುಲ್ ಎದುರು, ಚುನಾವಣೆಯ ಸಂದರ್ಭದಲ್ಲಿ ತಮಗೆ ಆಗಿರುವ ನೋವು ಸಂಕಟ, ಎದುರಿಸಿದ ಸಂದರ್ಭಗಳು ಈ ಸೋಲಿಗೆ ಕಾರಣ ಎಂದೂ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಹೇಳಲಾಗಿದೆ.
 'ನಾಯಕರು ಎನಿಸಿಕೊಂಡವರೆಲ್ಲರೂ ನಡು ನೀರಿನಲ್ಲಿ ಕೈ ಬಿಟ್ಟರು. ಆದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿ ಬಲಪಡಿಸಬೇಕು. ಅದಕ್ಕಾಗಿ ರಾಜಕೀಯ ಶಕ್ತಿಯೂ ಬೇಕು' ಎಂಬ ಅಂಶವನ್ನು ಸೂಚ್ಯವಾಗಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಈ ಹಿಂದೆ ಶ್ರೀರಂಗಪಟ್ಟಣ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಃ ಅಂಬರೀಷ್ ಸೋತ ಸಮಯದಲ್ಲೂ ಯಾರ ವಿರುದ್ಧವೂ ಕಾಂಗ್ರೆಸ್ ವರಿಷ್ಠರು ಕ್ರಮ ಕೈಗೊಂಡಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.