ಗಾಂಧಿ ಮತ್ತು ಮೋದಿ, ವಿಭಿನ್ನ ಸಾಮ್ಯ
ಮೇ 16ರ ನಂತರ ನಾವು ಖಂಡಿತವಾಗಿ ಹೊಸ ಗುಜರಾತನ್ನು ನೋಡಬಹುದು. ಭಾರತಕ್ಕೆ ಅತ್ಯಂತ ಪ್ರಮುಖ ನಾಯಕರನ್ನು ದೇಶಕ್ಕೆ ನೀಡಿದ ರಾಜ್ಯವೆಂದು ಗುಜರಾತ್ ಇನ್ನು ಮುಂದೆ ಎದ್ದು ಕಾಣಲಿದೆ. ಮೊಟ್ಟ ಮೊದಲಿಗೆ ಮೋಹನ್ದಾಸ್ ಕರಂಚಂದ್ ಗಾಂಧಿ ಹೆಸರು ಇರಲೇ ಬೇಕು. ಗುಜರಾತಿನ ಕಡಲ ಪ್ರದೇಶವಾದ ಪೋರ್ಬಂದರ್ನಲ್ಲಿ ಜನಿಸಿದ ಈ ಮಹಾನ್ ವ್ಯಕ್ತಿಯ ಹೆಸರು ಇಂದಿಗೂ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಗೂ ಗಾಂಧಿಗೂ ಬಹಳಷ್ಟು ಸಾಮ್ಯತೆ ಇಲ್ಲದಿದ್ದರೂ ಕೆಲವು ವಿಚಾರಗಳಲ್ಲಿ ಆಲೋಚನೆಗಳು ಒಂದೇ ರೀತಿ ಇವೆ. ಗುಜರಾತಿನಲ್ಲೇ ಇಬ್ಬರು ಜನಸಿದ್ದರು ಎಂಬ ಅಂಶವಲ್ಲದೆ ಸಮಾನವಿರುವ ವಿಚಾರಗಳೆಂದರೆ ಸಸ್ಯಹಾರಿಯಾಗಿರುವುದು ಮತ್ತು ಪ್ರತಿಬಂಧದ ಬಗೆಗಿನ ನಿಲುವು.
ಗಾಂಧಿಯಿಂದ ಮೋದಿಯ ವರೆಗೆ ದೇಶವನ್ನು ನಡೆಸುವ ಪ್ರವೃತ್ತಿಯ ಜನರು ವಿರೋಧ ದಿಕ್ಕಿನಲ್ಲಿ ಸಾಗುತ್ತಿದ್ದಾರಾ? ನಮ್ಮ ಇತಿಹಾಸವನ್ನು ಓದಿ ಗಾಂಧಿ ಬಗ್ಗೆ ತಿಳಿಯುವುದು ಅದೆಷ್ಟು ಅಗತ್ಯವೋ, ಅಷ್ಟೇ ಅಗತ್ಯವಿದೆ ಮೋದಿ ಬಗ್ಗೆ ತಿಳಿಯುವುದು. ಕಾರಣಗಳು ಬೇರೆ ಇರಬಹುದು, ಆದರೆ ಗಾಂಧಿ ತರಹ ಮೋದಿಯೂ ವಿಶ್ವವಿಖ್ಯಾತರಾಗುವ ಸಾಧ್ಯತೆಗಳಿವೆಯಾ? ವೀಸಾ ನಿರಾಕರಿಸಿದ್ದ ದೇಶಗಳು ಮೋದಿಯನ್ನು ಹೇಗೆ ಕಾಣಲಿವೆ? ಮೋದಿ ಪರ ಪ್ರಚಾರ ಎಷ್ಟೊಂದು ಪರಿಣಾಮಕಾರಿಯಾಗಿತ್ತು ಅಂದರೆ ಶೇ.31ರಷ್ಟು ಮತಗಳನ್ನು ಸಂಸತ್ತಿನಲ್ಲಿ ಶೇ. 52ರಷ್ಟು ಸ್ಥಾನಗಳನ್ನಾಗಿ ಪರಿವರ್ತಿಸಿತ್ತು. ಹಾಗಾಗಿ ಕೇವಲ ರಾಷ್ಟ್ರದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಪ್ರಭಾವ ಬೀರಲಿರುವ ಗುಜರಾತಿನಿಂದ ಹುಟ್ಟಿ ಬಂದ ಎರಡನೇ ವ್ಯಕ್ತಿ ಮೋದಿ ಎನ್ನಬಹುದೇನೋ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾತಂತ್ರವಾದ ಭರತದ ಪ್ರಧಾನಿಯಾದ ಮೋದಿಗೆ ವಿಶ್ವವಿಖ್ಯಾತರಾಗಲು ಬೇಕಾಗುವ ವ್ಯಕ್ತಿತ್ವ, ದರ್ಪ, ಧ್ಯೇಯ ಮತ್ತು ಉತ್ಸಾಹ ಎಲ್ಲವೂ ಇದೆ. ಪಶ್ಚಿಮ ದೇಶಗಳ ಆರ್ಥಿಕ ವಿದ್ಯಾಸಂಸ್ಥೆಗಳು ಮತ್ತು ಮಾಧ್ಯಮ ಯಾರನ್ನು ನಿರಂಕುಶ ನಾಯಕರೆಂದು ಪೂಜಿಸುತ್ತವೋ, ಅವರಲ್ಲಿ ಮೋದಿ ಕೂಡಾ ಒಬ್ಬರಾಗುವ ಎಲ್ಲ ಸಾಧ್ಯತೆಗಳಿವೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ರವರಿಗೆ ಹೋಲಿಸಿದರೆ ಮೋದಿ ಮಾಡಲಿರುವ ವ್ಯಾಪಾರ ವಹಿವಾಟುಗಳೆಲ್ಲ ವಿಶ್ವದ ಕಣ್ಣಿಗೆ ಎದ್ದು ಕಾಣಿಸಲಿದೆ.
ಅಸಲಿಗೆ ಈ ಗುಜಾರಾತಿ-ಅಸಾಧಾರಣ ಪ್ರತಿಭೆಯಲ್ಲಿ ಅಂತಹದ್ದು ಏನಿದೆ? ದ ಶೇಪಿಂಗ್ ಆಫ್ ಮಾಡರ್ನ್ ಗುಜರಾತ್ ಎಂಬ ಪುಸ್ತಕದ ಲೇಖಕ ಅಚ್ಯುತ್ ಯಾಗ್ನಿಕ್ ಪ್ರಕಾರ ಗಾಂಧಿ ಮತ್ತು ಮೋದಿ- ಇಬ್ಬರಿಗೂ ಅಜಗಜಾಂತರ ವ್ಯತ್ಯಾಸವಿದೆ ಮತ್ತು ಅವರನ್ನು ಹೋಲಿಸಲು ಆಗುವುದಿಲ್ಲ. ಆದರೆ, ಮೋದಿಯ ಸ್ವಭಾವವನ್ನು ಗಮನಿಸಿದರೆ ಗುಜರಾತಿ ವ್ಯಾಪಾರಿಯ ತತ್ವಗಳು ಮೋದಿ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವ ಬೀರಿದಂತಿದೆ. ಆರ್ಎಸ್ಎಸ್ನ ಹಿನ್ನೆಲೆಯೂ ಪ್ರಭಾವ ಬೀರಿದೆ ಆದರೆ ಮೋದಿ ಮತೀಯ ಮನೋಭಾವ ತೋರುವುದಿಲ್ಲ. ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಮೋದಿ ಉಳಿದವರಿಗಿಂತ ಭಿನ್ನ.
ಗುಜರಾತಿನಲ್ಲಿ ಅಧಿಕಾರಶಾಹಿ ನಾಯಕತ್ವ ಆರಂಭವಾಗಿದ್ದು ಸರ್ದಾರ್ ಪಟೇಲ್ರಿಂದ. ಅವರ ಬಳಿಕ ಕಾಂಗ್ರೆಸ್ ನಾಯಕರಾದ ಮೊರಾರ್ಜಿ ದೇಸಾಯಿಯನ್ನು ಸರ್ವೋಚ್ಚ ನಾಯಕ ಎನ್ನಲಾಯಿತು. ಕಾರಣ- 1960ರಲ್ಲಿ ಬಾಂಬೆಯಿಂದ ಬೇರ್ಪಟ್ಟು ಗುಜರಾತ್ ಹೊಸ ರಾಜ್ಯವಾಗಿದ್ದು. ಅನಂತರ ಮತ್ತೊಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ಚಿಮನ್ಭಾಯಿ ಪಟೇಲ್ರವರನ್ನು ಛೋಟೆ ಸರ್ದಾರ್ (ಚಿಕ್ಕ ಸರದಾರ) ಎಂದು ಕರೆಯಲಾಯಿತು. ಅದೇ ಬಿರುದು ಮೋದಿಗೂ ದೊರಕಿತು 2002ರಲ್ಲಿ. ಆದರೀಗ ಅವರು ಚಿಕ್ಕ ಸರದಾರರಾಗಿ ಉಳಿದಿಲ್ಲ, ಎಷ್ಟೋ ಬೆಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

