ರೇಲ್ವೆ ಭೂ ಸ್ವಾಧೀನದಲ್ಲಿ ಬಾಗಲಕೋಟೆ ಪ್ರಥಮ
ಬಾಗಲಕೋಟೆ: ರೇಲ್ವೆ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಬಾಗಲಕೋಟೆ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ಕಂದಾಯ ಹಾಗೂ ರೇಲ್ವೆ ಇಲಾಖೆ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು ಈ ಸಂಬಂಧ ಬಾಗಲಕೋಟೆ ಜಿಲ್ಲಾಡಳಿತ ಪ್ರಶಂಸೆಗೆ ಒಳಗಾಗಿದೆ. ಕಳೆದ ವರ್ಷ ಒಟ್ಟಾರೆ ಆಗಿರುವ ಭೂ ಸ್ವಾಧೀನಲ್ಲಿ ಶೇ.80ರಷ್ಟು ಪಾಲು ಬಾಗಲಕೋಟೆ ಜಿಲ್ಲೆಯದಾಗಿದೆ. ಬಾಗಲಕೋಟೆ- ಕುಡುಚಿ ನಡುವಿನ ಮಾರ್ಗಕ್ಕೆ ವಶಪಡಿಸಿಕೊಂಡ ಭೂಮಿ ಇದಾಗಿದೆ.
ಬಾಗಲಕೋಟೆ ಹಾಗೂ ಕುಡುಚಿ ನಡುವಿನ ಸುಮಾರು 141 ಕಿ.ಮೀ ದೂರದ ರೈಲು ಮಾರ್ಗಕ್ಕೆ ಮೂರು ವರ್ಷಗಳ ಹಿಂದೆ 820 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು. ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ 1900 ಎಕರೆ ಭೂಮಿ ಯೋಜನೆಗೆ ಅಗತ್ಯವಾಗಿದ್ದು ಬಾಗಲಕೋಟೆಯ 1795 ಹಾಗೂ ಬೆಳಗಾವಿಯ ರಾಯಭಾಗ ತಾಲೂಕಿನ 120 ಎಕರೆಯಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಇದುವರೆಗೂ 381 ಎಕರೆಯಷ್ಟು ಭೂಮಿಗೆ ಅವಾರ್ಡ್ ಮಾಡಿ ಖುಷ್ಕಿಗೆ ಎಕರೆಗೆ 6 ಲಕ್ಷ, ನೀರಾವರಿಗೆ 12 ಲಕ್ಷ ಪರಿಹಾರ ನೀಡಲು ಸರ್ಕಾರ ಘೋಷಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

