ಪ್ರಧಾನ ಸುದ್ದಿ

ಹೆಣ್ಣು ಮಗು ಶಿರಚ್ಛೇದ ಕಾರಣ ಇನ್ನೂ ನಿಗೂಢ

Published On :

ಫಿರೋಜಾಬಾದ್: ಈ ತಿಂಗಳ 21ರ ಬುಧವಾರ ಕಣ್ಮರೆಯಾಗಿ ಮೇ 26ರಂದು ರುಂಡ- ಮುಂಡ ಬೇರ್ಪಡಿಸಿದ ಸ್ಥಿತಿಯಲ್ಲಿ ದೊರಕಿರುವ ಒಂದೂವರೆ ವರ್ಷದ ಹಸುಳೆ ಸಾದಿಯಾದ್ ಅಯಾತ್ ಸಾವಿನ ಪ್ರಕರಣ ದಿನಕಳೆದಂತೆ ನಿಗೂಢವಾಗುತ್ತಿದೆ.
ಗುಲ್ಬರ್ಗ- ಜೇವರ್ಗಿ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಭೀಮಾ ತೀರದ ಪುಟ್ಟ ಗ್ರಾಮ ಫಿರೋಜಾಬಾದ್. ಇಲ್ಲಿನ ಜನ ತಮ್ಮೂರಲ್ಲೇ ಸಂಭವಿಸಿರುವ ಹಸುಳೆಯ ಶಿರಚ್ಛೇದ ಹಾಗೂ ಅಂಗಾಂಗ ತುಂಡರಿಸಿದಂತಹ ಭೀಕರ ಪ್ರಸಂಗಕ್ಕೆ ಕಣ್ಣೀರು ಹಾಕುತ್ತಿದ್ದು, ಭಯಗೊಂಡಿದ್ದಾರೆ. ಮಗುವನ್ನು ತುಂಬ ಬಲ್ಲವರು ಈ ಕುಕೃತ್ಯ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಏನಾಗಿತ್ತು: ಇದೇ ತಿಂಗಳ 21ರಂದು ಮಗು ಕಾಣೆಯಾಗಿದ್ದು, ತಂದೆ ಶಂಶದ್ ಅಲಂ ಪಾಶ ಸಿದ್ದಿಕಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಐದು ದಿನದ ನಂತರ ಅಂದರೆ ಸೋಮವಾರ ಬಸಯ್ಯ ಸ್ವಾಮಿ ಎಂಬುವರ ಢಿಹಾಳು ಬಿದ್ದಿರುವ ಖಾಲಿ ಜಾಗದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಖಾಲಿ ಜಾಗದಲ್ಲಿ ವಾಸನೆ ಬರುತ್ತಿತ್ತು. ಅಲ್ಲಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ದೇಹದ ಮೇಲಿದ್ದ ಅಂಗಿ (ಫ್ರಾಕ್) ನೋಡಿ ಸಿದ್ದಿಕಿ ಗುರುತಿಸಿದ್ದಾರೆ.
ಅಂಗಾಂಗಳನ್ನೇ ತುಂಡರಿಸಿದ್ದರು: ಮಗು ತಮ್ಮದೇ ಎಂದು ಪೋಷಕರು ಬಟ್ಟೆ ಮೇಲೆ ಕಂಡು ಹಿಡಿದರೇ ವಿನಃ ಆಕೆಯ ದೇಹದಲ್ಲಿ ಮುಖ, ಬಲಗೈ, ಬಲಗಾಲನ್ನೇ ಕತ್ತರಿಸಲಾಗಿತ್ತು. ಎಡಗಾಲು ಮತ್ತು ಎಡಗೈ ಮಾತ್ರ ಇತ್ತು. ಎಡಗಾಲು ಮೊಳಕಾಲಿನಿಂದ ಬೆರ್ಪಟ್ಟಿತ್ತು. ಬಾಯಿಯಲ್ಲಿನ ಕೆಲವು ಹಲ್ಲುಗಳು ಇರಲಿಲ್ಲ. ದೇಹದ ಚರ್ಮ ಸುಲಿದಿದ್ದು ಹುಳಗಳು ತುಂಬಿದ್ದವು.
ಅಲಂಪಾಶಾ ಕುಟುಂಬ ಬಿಹಾರ ಮೂಲದ್ದು: ಶಂಶದ್ ಕುಟುಂಬ ಮೂಲತಃ ಬಿಹಾರದವರು. ಕುಟುಂಬ ಸಮೇತ ಇಲ್ಲಿಗೆ ಬಂದು ನೆಲೆಸಿ ದಶಕ ಕಳೆದಿದೆ. ಇಲ್ಲಿನ ಮಸೀದಿಯಲ್ಲಿ ಮಕ್ಕಳಿಗೆ ಧಾರ್ಮಿಕ ವಿಷಯಗಳನ್ನು ಹೇಳಿಕೊಡುವ ಗುರುವಾಗಿ ಅವರು ಇಲ್ಲಿಗೆ ಬಂದಿದ್ದರು. ಇಬ್ಬರು ಪುತ್ರರು, ಒಬ್ಬಳು ಪುತ್ರಿಯನ್ನು ಶಂಶದ್ ಹೊಂದಿದ್ದರು. ಇದೀಗ ಪುತ್ರಿ ಸಾದಿಯಾದ್ ಕಳೆದುಕೊಂಡು ತೀವ್ರ ದುಃಖಿಸುತ್ತಿದ್ದಾರೆ.
2004 ರಲ್ಲಿ: ಹೊನ್ನಕಿರಣಗಿ ಎಂಬಲ್ಲಿ 2004ರಲ್ಲಿ ಬಾಲಕಿಯನ್ನು ಅಪಹರಿಸಿ ಅಂಗಾಂಗ, ಶಿರ ತುಂಡರಿಸಿ ಎಸೆಯಲಾಗಿತ್ತು. ಇದರ ಹಿಂದೆ ಮಾಟ-ಮಂತ್ರವಾದಿ ಬಸಣ್ಣ ಮತ್ತವರ ತಂಡದ ಪಾತ್ರವಿತ್ತು ಎಂಬಂಶ ತನಿಖೆಯಿಂದ ಬಹಿರಂಗವಾಗಿತ್ತು. ಫಿರೋಜೋಬಾದ್ ಪ್ರಕರಣಕ್ಕೂ- ಹೊನ್ನಕಿರಣಗಿ ಘಟನೆಗೂ ತುಂಬ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.