

ಹೌರಾ: ಬಿಎಸ್‌ಎನ್‌ಎಲ್ ಸಂಸ್ಥೆಯ ಪುನಶ್ಚೇತನಕ್ಕೆ ಸರ್ಕಾರ ಕಾರ್ಯಗತವಾಗಬೇಕು ಎಂಬ ಬೇಡಿಕೆಯನ್ನೊಡ್ಡಿ 2015 ಫೆ.3 ರಿಂದ ಬಿಎಸ್‌ಎನ್‌ಎಲ್ ನೌಕರರು ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಿದ್ದಾರೆ.
ಸರ್ಕಾರಗಳು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಉತ್ತೇಜನ ನೀಡುತ್ತಿರುವ ಕಾರಣ 2007ರಿಂದ ಬಿಎಸ್‌ಎನ್‌ಎಲ್ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ನಮ್ಮ ಕಂಪನಿಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿ ಬಿಎಸ್‌ಎನ್‌ಎಲ್ ನೌಕರರ ಸಂಘಗಳು 2015 ಫೆ. 3ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಕೇಂದ್ರ ಪ್ರಧಾನ ಕಾರ್ಯದರ್ಶಿ ಪಿ. ಅಭಿಮನ್ಯು ಹೇಳಿದ್ದಾರೆ.
ಸರ್ಕಾರ ಬಿಎಸ್‌ಎನ್‌ಎಲ್‌ನ್ನು ಕಡೆಗಣಿಸಿದಾಗ ಖಾಸಗಿ ಕಂಪನಿಗಳು ಲಗ್ಗೆಯಿಟ್ಟವು. ಸರ್ಕಾರದ ಕಡೆಗಣನೆಯಿಂದಾಗಿಯೇ ಪ್ರಸ್ತುತ ಕಂಪನಿಗೆ ಇಷ್ಟೊಂದು ನಷ್ಟ ಸಂಭವಿಸಿದೆ ಎಂದು ಅಭಿಮನ್ಯು ದೂರಿದ್ದಾರೆ.