ಟಿಆರ್‌ಪಿಗೋಸ್ಕರ ಅತ್ಯಾಚಾರದ ಸುದ್ದಿ: ಜಾರ್ಜ್ ಹೇಳಿಕೆ ವಿರುದ್ಧ ಆಕ್ರೋಶ

ಮಾಧ್ಯಮದವರು ಟಿಆರ್‌ಪಿಗೋಸ್ಕರ ಅತ್ಯಾಚಾರದ ಸುದ್ದಿಯನ್ನು ಹೈಲೈಟ್ ಮಾಡ್ತಾ ಇದ್ದಾರೆ- ಹೀಗೆ ಹೇಳುವ ಮೂಲಕ ರಾಜ್ಯ...
ಕೆ.ಜೆ ಜಾರ್ಜ್ (ಸಂಗ್ರಹ ಚಿತ್ರ)
ಕೆ.ಜೆ ಜಾರ್ಜ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಮಾಧ್ಯಮದವರು ಟಿಆರ್‌ಪಿಗೋಸ್ಕರ ಅತ್ಯಾಚಾರದ ಸುದ್ದಿಯನ್ನು ಹೈಲೈಟ್ ಮಾಡ್ತಾ ಇದ್ದಾರೆ- ಹೀಗೆ ಹೇಳುವ ಮೂಲಕ ರಾಜ್ಯ ಗೃಹ  ಸಚಿವ ಕೆ.ಜೆ ಜಾರ್ಜ್ ವಿವಾದಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ಶಾಲೆಯಲ್ಲಿ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದರ ಬಗ್ಗೆ ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಚಿವರು ಈ ರೀತಿ ಹಾರಿಕೆಯ ಉತ್ತರ ನೀಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಧ್ಯಮದವರು ಬರೀ ಅತ್ಯಾಚಾರದ ಸುದ್ದಿಯನ್ನೇ ಮಾಡುತ್ತಿದ್ದಾರೆ. ನಿಮಗೆ ಬೇರೆ ಸುದ್ದಿಯಿಲ್ಲವೇ? ಎಂದು ಕೇಳಿ ವಿವಾದ ಸೃಷ್ಟಿಸಿದ್ದರು.

ಇದೀಗ ಗೃಹ  ಸಚಿವರು ಕೂಡಾ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.
 
ಮಾಧ್ಯಮದವರ ಮೇಲೆ ಗೂಬೆ ಕೂರಿಸುವ ಮೂಲಕ ಗೃಹ  ಸಚಿವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಿಂದಾಗಿಯೇ ಇಷ್ಟೊಂದು ಘಟನೆಗಳು ಬಹಿರಂಗವಾಗಿರುವುದು ಎಂದು ಬಿಪಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಟ್ರಾಪರ್ ಮಾಧ್ಯಮದವರಲ್ಲಿ ಹೇಳಿದ್ದಾರೆ.

ಜಾರ್ಜ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಾರ್ಜ್ ಅವರು ಮಾಧ್ಯಮದವರ ಮೇಲೆ ಹರಿಹಾಯ್ದಿರುವುದನ್ನು ನೋಡಿದರೆ ಅವರ ಸರ್ಕಾರಕ್ಕೆ ಏನೂ ಮಾಡಲು ತೋಚದೆ ಕೈ ಚೆಲ್ಲಿ ಭಯಭೀತರಾಗಿರುವಂತೆ ಕಾಣುತ್ತದೆ. ತಮ್ಮ ಕೆಲಸವನ್ನು ಸರಿಯಾಗಿ ಮಾಡಲಾಗದೆ, ಆ ಸಿಟ್ಟನ್ನು ಮಾಧ್ಯಮಗಳ ಮೇಲೆ ತೋರಿಸುವುದು ಸರಿಯಲ್ಲ ಎಂದಿದ್ದಾರೆ.

ಅದೇ ವೇಳೆ, ಜಾರ್ಜ್ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ ಜಗದೀಶ್ ಶೆಟ್ಟರ್ ತಾನು ಈ ವರೆಗೂ ಸಿದ್ಧರಾಮಯ್ಯರಷ್ಟು ಬೇಜವಾಬ್ದಾರಿಯಾಗಿರುವ ಮುಖ್ಯಮಂತ್ರಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com