"ಹಲೋ ವರ್ಲ್ಡ್, ಇನ್ಸ್ಟಾಗ್ರಾಮ್ ನಲ್ಲಿರುವುದು ಅದ್ಭುತ" ಎಂದ ಮೋದಿ

ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ...
ಪ್ರಧಾನಿ ಮೋದಿ ಅವರು ಇನ್ಸ್ಟಾಗ್ರಾಮ್  ನಲ್ಲಿ ಹಂಚಿಕೊಂಡ ಮೊದಲ ಚಿತ್ರ
ಪ್ರಧಾನಿ ಮೋದಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಮೊದಲ ಚಿತ್ರ
Updated on: 

ನಾಯ್ ಪ್ಯಿ ತಾವ್: ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಫೋಟೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆಯ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಮತ್ತೊಂದು ಜಾಲತಾಣದಲ್ಲಿ ತಮ್ಮ ಆಗಮನವನ್ನು ಘೋಷಿಸಿರುವ ಮೋದಿ ಅವರು "ಹಲೋ ವರ್ಲ್ಡ್! ಇನ್ಸ್ಟಾಗ್ರಾಮ್ ನಲ್ಲಿರುವುದು ಅದ್ಭುತ. ನನ್ನ ಮೊದಲ ಫೋಟೋ. ಏಸಿಯಾನ್ ಸಮಾವೇಶದ್ದು" ಎಂದು ಬರೆದಿದ್ದಾರೆ.

ಅಂತರ್ಜಾಲದಲ್ಲಿ ಫೋಟೋ, ವಿಡಿಯೊ ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಪಾದಾರ್ಪಣೆ ಮಾಡಿದ ೧೩ ನಿಮಿಷಗಳಲ್ಲಿ ಪ್ರಧಾನಿ ಮೋದಿಯವರಿಗೆ ೩೫ ಸಾವಿರ ಹಿಂಬಾಲಕರು ದೊರೆತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ೬೪ ವರ್ಷದ ಭಾರತದ ಈ ರಾಜಕಾರಣಿಗೆ ಟ್ವಿಟ್ಟರ್ ನಲ್ಲಿ ಈಗಾಗಲೇ ೮ ದಶ ಲಕ್ಷ ಹಿಂಬಾಲಕರಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಮೋದಿ ಅವರು ಅಂತರ್ಜಾಲದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದೂ ಒಂದು ಮಹತ್ವದ ಕಾರಣ ಎನ್ನಲಾಗುತ್ತದೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಟ್ವಿಟ್ಟರ್ ಗಳಲ್ಲಿ ನಿಯಮಿತವಾಗಿ ತಮ್ಮ ವಿದೇಶಿ ಪ್ರವಾಸಗಳ ಫೋಟೋಗಳನ್ನು ಮತ್ತು ಅಪ್ಡೇಟ್ ಗಳನ್ನು ನೀಡುತ್ತಿರುವ ಪ್ರಧಾನಿ ಮೋದಿ ಈಗ ಮೂರನೇ ಪ್ರಮುಖ ವಿದೇಶಿ ಪ್ರವಾಸದಲ್ಲಿದ್ದಾರೆ. ಉಳಿದ ಸಚಿವರಿಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com