

ನವದೆಹಲಿ: ದಕ್ಷಿಣ ಏಶಿಯಾ ಪ್ರದೇಶಕ್ಕೆ ವಿಶ್ವಸಂಸ್ಥೆಯ ಸದ್ಭಾವ ಮಹಿಳಾ ರಾಯಭಾರಿಯಾಗಿ ನೇಮಕಗೊಂಡ ಮೇಲೆ, "ಈ ದೇಶದಲ್ಲಿ ಸಾನಿಯಾ ಮಿರ್ಜಾ ಆಗಿ ಬದುಕುವುದು ಕಷ್ಟ. ಲೈಂಗಿಕ ಅಸಮಾನತೆ ಬಹಳವಾಗಿದೆ. ಇಲ್ಲಿ ಮಹಿಳೆಯರನ್ನು ಪ್ರಾಣಿಗಳಾಗಿ ಕಾಣುತ್ತಾರೆ" ಎಂದು ಹೇಳಿದ್ದರು ಎಂದು ವರದಿಯಾಗಿತ್ತು.
ಆದರೆ ಈಗ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಸ್ಪಷ್ಟೀಕರಣ ನೀಡಿರುವ ಸಾನಿಯಾ "ಎರಡು ವಿಷಯಗಳನ್ನು ಸ್ಪಷ್ಟೀಕರಿಸಲು-- ಭಾರತದಲ್ಲಿ ಮಹಿಳೆಯರನ್ನು ಗೌರವಿಸುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾನು ಈ ಪ್ರದೇಶದ ರಾಯಭಾರಿ" ಎಂದಿದ್ದಾರೆ.