ಪ್ರಧಾನ ಸುದ್ದಿ

ಮೋದಿ ಅಮೆರಿಕ ಭೇಟಿ ಯಶಸ್ವಿ

ಮೋದಿ ಅಮೆರಿಕ ಭೇಟಿ ಯಶಸ್ವಿ
Published On :

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಮೆರಿಕ ಭೇಟಿ ಯಶಸ್ವಿಯಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜತೆಗೆ ವೈಯುಕ್ತಿಕ ಸಖ್ಯ ಮಾತ್ರವಲ್ಲ ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲೂ ಈ ಪ್ರವಾಸ ಮಹತ್ವದ ನೆರವು ನೀಡಿದೆ.

ಒಬಾಮರ ವಿನಯ ಮತ್ತು ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಅವರ ಹೊಸ ರೂಪ ನೀಡಿದ್ದಾರೆ ಎಂದಿದ್ದಾರೆ. ಸ್ವದೇಶಕ್ಕೆ ಮರಳುವ ಮೊದಲು ಪ್ರವಾಸದುದ್ದಕ್ಕೂ ಪ್ರೀತಿ ತೋರಿದ್ದಕ್ಕಾಗಿ ಅಮೆರಿಕಕ್ಕೆ ಧನ್ಯವಾದವನ್ನೂ ಅರ್ಪಿಸಿದ್ದಾರೆ ಮೋದಿ.

ವಿಚಾರಗಳನೇಕ:
ಇಬ್ಬರೂ ನಾಯಕರು ವಿಸ್ಮೃತ ವ್ಯೂಹಾತ್ಮಕ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಮೋದಿ, ರೇಲ್ವೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆ ಮತ್ತು ಸಹಭಾಗಿತ್ವಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಕಾಲ ಮಿಂಚಿಹೋಗುವ ಮುನ್ನ ಭಾರತದಲ್ಲಿ ಹೂಡಿಕೆ ಮಾಡಿ ಮತ್ತು ಈಗಿರುವ ಘಟಕ ವಿಸ್ತರಿಸುವಂತೆ ಅಮೆರಿಕದ ಕಾರ್ಪೋರೇಟ್ ಸಂಸ್ಥೆಗಳಿಗೆ ಸಲಹೆಯನ್ನೂ ನೀಡಿದ್ದಾರೆ.

6 ತಿಂಗಳು: ಪ್ರವಾಸದ ಕೊನೆಯ ದಿನ ಯುಎಸ್-ಅಮೆರಿಕನ್ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೂಡಿಕೆಗೆ ಸಂಬಂಧಿಸಿದ ಅಡೆತಡೆಗಳನ್ನು ಆರು ತಿಂಗಳೊಳಗೆ ನಿವಾರಿಸುವುದಾಗಿಯೂ ಮೋದಿ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 2531 ಶತಕೋಟಿ ಹೂಡಿಕೆ ಮಾಡುವುದಾಗಿ ಯುಎಸ್‌ಐಬಿಎಲ್ ಪ್ರಕಟಿಸಿದೆ.

30 ಸಾವಿರ ಶತಕೋಟಿ: ಮೋದಿ ಅಮೆರಿಕ ಭೇಟಿಯ ಮಹತ್ವದ ಉದ್ದೇಶ ವಿದೇಶಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವುದು. ದ್ವಿಪಕ್ಷೀಯ ಒಪ್ಪಂದದ ವೇಳೆ ಅಮೆರಿಕದಿಂದಲೂ ಇದಕ್ಕೆ ಪೂರಕ ಪ್ರತಿಕ್ರಿಯೆ ಸಿಕ್ಕಿದೆ. ಭವಿಷ್ಯದಲ್ಲಿ  ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 30.875 ಶತಕೋಟಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಜತೆಗೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ದೇಶಗಳ ನಡುವಿನ ಆರ್ಥಿಕ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಹೂಡಿಕೆ ಉತ್ತೇಜಿಸಲು ಜಂಟಿ ಕಾರ್ಯಕ್ರಮ ರೂಪಿಸಲೂ ಉದ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.