ಕನ್ನಡಿಗ ಎಚ್.ಎಲ್ ದತ್ತು ನೂತನ ಸಿಜೆಐ

ನವದೆಹಲಿ: ಸುಪ್ರೀಂಕೋರ್ಟ್ನ ನೂತನ ಮುಖ್ಯ ನ್ಯಾಯಾಧೀಶರಾಗಿ ಕನ್ನಡಿಗ ನ್ಯಾಯಮೂರ್ತಿ ಎಚ್.ಎಲ್. ದತ್ತು(ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು) ನೇಮಕಗೊಂಡಿದ್ದಾರೆ.
ಸುಪ್ರೀಂಕೋರ್ಟ್ನ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ನೇಮಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಸೆಪ್ಟಂಬರ್ 27ಕ್ಕೆ ಹಾಲಿ ನ್ಯಾಯಮೂರ್ತಿ ಆರ್.ಎಂ ಲೋಧಾ ಅವರು ನಿವೃತ್ತರಾಗಲಿದ್ದು, ನೂತನ ನ್ಯಾಯಮೂರ್ತಿ ಸ್ಥಾನಕ್ಕೆ ಎಚ್.ಎಲ್ ದತ್ತು ಅವರ ಹೆಸರನ್ನು ಸೂಚಿಸಿ ಲೋಧಾ ಅವರು ಕಡತವನ್ನು ಕೇಂದ್ರ ಸರ್ಕಾರಕ್ಕೆ ಕಳೆದ ಶುಕ್ರವಾರ ಕಳುಹಿಸಿದ್ದರು. ಇದಕ್ಕೆ ಸರ್ಕಾರ ಅಂದೇ ಅಂಗೀಕರಿಸಿದ್ದು, ಪ್ರಧಾನ ಮಂತ್ರಿ ಕಚೇರಿ ನ್ಯಾಯಮೂರ್ತಿ ದತ್ತು ಅವರ ನೇಮಕದ ಕಡತವನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಿತ್ತು.
ನರೇಂದ್ರ ಮೋದಿ ಸರ್ಕಾರ ಹಳೆಯ ಕೊಲೀಜಿಯಂ ಪದ್ಧತಿಯನ್ನು ರದ್ದು ಪಡಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗವನ್ನು ರಚಿಸಿದ ಬಳಿಕ ನ್ಯಾ. ದತ್ತು ಅವರ ನೇಮಕ ನಡೆಯುತ್ತಿದೆ.
ನ್ಯಾ. ದತ್ತು ನಡೆದು ಬಂದ ಹಾದಿ
ನ್ಯಾ. ಎಚ್.ಎಲ್. ದತ್ತು 1950ರ ಡಿ.3ರಂದು ಜನಿಸಿದರು. ಬಿಎಸ್ಸಿ ಎಲ್ಎಲ್ಬಿ ಪದವೀಧರರಾದ ದತ್ತು 1975ರ ಅ.23ರಂದು ವಕೀಲರಾಗಿ ನೋಂದಾಯಿತರಾದರು. ಅವರು ಮೊದಲು ವಕೀಲಿ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ , ಕ್ರಿಮಿನಲ್, ಸಾಂವಿಧಾನಿಕ ಮತ್ತು ತೆರಿಗೆ ಸಂಬಂಧಿ ವ್ಯಾಜ್ಯಗಳಲ್ಲಿ ಅವರು ವಾದ ಮಾಡುತ್ತಿದ್ದರು.
1983ರಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು 1990ರಲ್ಲಿ ಸರ್ಕಾರಿ ಅಡ್ವೋಕೇಟ್ ಆಗಿ ನಿಯೋಜಿತರಾಗಿ 1992ರವರೆಗೆ ಕಾರ್ಯನಿರ್ವಹಿಸಿದರು. 1992ರಿಂದ 1993ವರೆಗೆ ತೆರಿಗೆ ಇಲಾಖೆಯ ಹೆಚ್ಚುವರಿ ಸ್ಥಾಯಿ ವಕೀಲರಾಗಿದ್ದ ಅವರು, ಬೆಂಗಳೂರು ಮಹಾನಗರಪಾಲಿಕೆಯ ವಕೀಲರಾಗಿಯೂ ಕೆಲಸ ಮಾಡಿದರು.
1995ರ ಡಿ.18ರಂದು ಕರ್ನಾಟಕ ಹೈಕೋರ್ಟ್ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು , 2007ರ ಮೇ 18ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದರು. ಬಳಿಕ 2008ರ ಡಿ.17ರಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


