ಪ್ರಧಾನ ಸುದ್ದಿ

ವಿಫಲ ಪ್ರೇಮಕ್ಕೆ ಅತ್ಯಾಚಾರದ ಬಣ್ಣ ಬಳಿದರಾ?

ವಿಫಲ ಪ್ರೇಮಕ್ಕೆ ಅತ್ಯಾಚಾರದ ಬಣ್ಣ ಬಳಿದರಾ?
Published On :

ದೂರಿನಲ್ಲಿ ಒಂದು ಕಡೆ ನಾವು ಆಗಾಗ ಸೇರುತ್ತಿದ್ದೇವು ಎಂದು ಬರೆದ ಮೈತ್ರಿಯಾ ನಂತರ ಅದನ್ನು ಕಾಟುಹಾಕಿ ಅತ್ಯಾಚಾರ ನಡೆಸಿದ್ದಾನೆ ಎಂದು ಬರೆದಿದ್ದೇಕೆ? ಅಲ್ಲದೇ ಮೈತ್ರಿಯಾ ಗೌಡ ಹಲವು ಕಡೆ ಮೈತ್ರಿಯಾ ವೈಫ್ ಆಫ್ ಕಾರ್ತಿಕ್ ಗೌಡ ಎಂದೇ ಹೇಳಿಕೊಂಡಿದ್ದಾಳೆ. ಮದುವೆಯಾದ ನಂತರ ನಡೆಸಿದ ಲೈಂಗಿಕ ಸಂಪರ್ಕ ಅತ್ಯಾಚಾರ ಹೇಗಾದೀತು?

ಬೆಂಗಳೂರು: ಸದ್ಯದ ಸ್ಥಿತಿಯಲ್ಲಿ ಅತ್ಯಂತ ಹೆಚ್ಚು ದುರ್ಬಳಕೆಯಾದ ಕಾನೂನಿನ ಪಟ್ಟಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 376(ಅತ್ಯಾಚಾರ) ಕೈ ಮೊದಲ ಸ್ಥಾನ!
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಅದರಲ್ಲೂ ಇತ್ತೀಚೆಗೆ ಸಚಿವರಾದ ತಕ್ಷಣ ಅವರ ಮೇಲೆ ನಾನಾ ರೀತಿಯ ಆರೋಪಗಳನ್ನು ಮಾಡುವುದು ಹೊಸ ಫ್ಯಾಷನ್. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಮಗನ ವಿರುದ್ಧದ ಅತ್ಯಾಚಾರ ಪ್ರಕರಣ.

ಯಾವುದೇ ದೃಷ್ಠಿಯಿಂದ ನೋಡಿದರೂ ಇದು ಅತ್ಯಾಚಾರ ಎಂಬಂತೆ ತೋರುವುದಿಲ್ಲ. ಬಹುಶಃ ಕಾನೂನು ಕೂಡ ಒಪ್ಪಲಿಕ್ಕಿಲ್ಲ. ಯಾಕೆಂದರೆ ಅತ್ಯಾಚಾರವಾಗಿದೆಯೆಂದು ಹೇಳುತ್ತಿರುವ ಮೈತ್ರಿಯಾ ಗೌಡ ಪದೇ ಪದೆ ಕಾರ್ತಿಕ್ ಗೌಡನ ಬಳಿಗೆ ಹೋಗಿದ್ದಾಳೆ! ಒಮ್ಮೆ ಅತ್ಯಾಚಾರ ನಡೆದರೆ ಯಾರಾದರೂ ಮತ್ತೆ ಅವರ ಬಳಿಗೆ ಹೋಗುತ್ತಾರೆಯೇ? ಖಂಡಿತ ಇಲ್ಲ. ಅತ್ಯಾಚಾರವಾದ ನಂತರ ದೂರು ನೀಡುತ್ತಾರೆ. ಇಲ್ಲವೇ ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ. ಆದರೆ ಪುನಃ ಅವರ ಬಳಿಗೆ ಹೋಗುವುದಿಲ್ಲ. ಹೋಗಿದ್ದಾರೆ ಅಂದರೆ ಒಂದೋ ಅತ್ಯಾಚಾರವೇ ನಡೆದಿಲ್ಲ. ಅಥವಾ ಸಮ್ಮತ ಲೈಂಗಿಕಕ್ರಿಯೆ ಎಂದರ್ಥವಲ್ಲವೇ?

ಆದರೆ, ಇದೀಗ ದೂರು ನೀಡಿರುವ ಮೈತ್ರಿಯಾಗೌಡ ಮೊದಲೇ ದೂರನ್ನೂ ಕೊಟ್ಟಿಲ್ಲ. ಸುಮ್ಮನೂ ಉಳಿದಿಲ್ಲ. ಬದಲಾಗಿ ಕಾರ್ತಿಕ್ ಗೌಡ ಬಳಿಗೆ ತಾನಾಗೇ ತೆರಳಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಕಾರ್ತಿಕ್‌ಗೌಡ ಮೈತ್ರಿಯಾ ಬಳಿಗೆ ಹೋಗಿಲ್ಲ! ಇದನ್ನು ಬೇರೆ ಯಾಹೂ ಹೇಳುತ್ತಿಲ್ಲ ಬದಲಾಗಿ ಮೈತ್ರಿಯಾ ನೀಡಿರುವ ದೂರೇ ಹೇಳುತ್ತಿದೆ. ಯಾಕೆಂದರೆ ಎಲ್ಲೂ ಮೈತ್ರಿಯಾಳ ಮನೆಗೆ ಕಾರ್ತಿಕ್ ಬಂದು ಅತ್ಯಾಚಾರ ಮಾಡಿಲ್ಲ.

ಮೈತ್ರಿಯಾ ದೂರಿನಲ್ಲಿ ಜೂನ್ ತಿಂಗಳಲ್ಲಿ ಕಾರ್ತಿಕ್ ನನ್ನನ್ನು ಮಂಗಳೂರಿಗೆ ಕರೆದುಕೊಂಡು ಹೋದ ಎಂದಿದೆ. ಆದರೆ ಮೈತ್ರಿಯಾ ವಿಮಾನದಲ್ಲಿ ಒಬ್ಬಳೇ ಹೋಗಿದ್ದಾಳೆ. ಒಬ್ಬಳೇ ಮರಳಿ ಬಂದಿದ್ದಾಳೆ. ಮಂಗಳೂರಿನಲ್ಲಿ ಅತ್ಯಾಚಾರ ಮಾಡಿದ ಎಂದು ಹೇಳುವ ಆಕೆ, ಮಂಗಳೂರಿನಿಂದ ಮರಳಿ ಬಂದ ನಂತರ ಒಂದು ಫ್ಲಾಟ್‌ನಲ್ಲಿ ಮತ್ತು ಕಾರ್ತಿಕ್‌ನ ಮನೆಯಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳುತ್ತಾಳೆ. ಒಮ್ಮೆ ಮಂಗಳೂರಿನಲ್ಲಿ ಅತ್ಯಾಚಾರವಾದ ನಂತರ ಮೈತ್ರಿಯಾ ಯಾಕೆ ದೂರು ಕೊಟ್ಟಿಲ್ಲ? ದೂರು ಕೊಡದಿದ್ದರೂ ಪರವಾಗಿಲ್ಲ ಕಾರ್ತಿಕ್ ಜತೆ ಸಂಪರ್ಕ ಇರಿಸಿಕೊಂಡಿದ್ದೇಕೆ? ಅವನ ಮನೆಗೆ ಹೋಗಿದ್ದೇಕೆ?

ಮಂಗಳೂರಿನಿಂದ ಬಂದ ನಂತರ ಮತ್ತು ಬೆಂಗಳೂರಿನಲ್ಲಿ ಕಾರ್ತಿಕ್ ಮನೆಗೆ ಹೋಗುವ ನಡುವೆ(ಸುಮಾರು ಒಂದು ತಿಂಗಳು ಸಮಯ) ಮೈತ್ರಿಯಾಳನ್ನು ಯಾರೂ ಬಂಧನದಲ್ಲಿ ಇರಿಸಿರಲಿಲ್ಲ.

- ವಿನಾಯಕ ಭಟ್ಟ ಮೂರೂರು



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.