ಪ್ರಧಾನ ಸುದ್ದಿ

ಸರ್ಕಾರಿ ಸೀಟು ಕೇಳುವವರೇ ಇಲ್ಲ!

ಸರ್ಕಾರಿ ಸೀಟು ಕೇಳುವವರೇ ಇಲ್ಲ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಕಳಪೆಯೆಂದೇ ಪರಿಗಣಿತವಾಗಿದೆ. ಇದು ನಮ್ಮ ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ಪರಿಣಾಮ ಬಡವರು ಕೂಡ ಅನಿವಾರ್ಯವಾಗಿ ದುಬಾರಿ ಖಾಸಗಿ ಕಾಲೇಜುಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗಷ್ಟೇ ನಡೆದ ಎಂಬಿಎ ಹಾಗೂ ಎಂಸೆ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯ ಬಳಿಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 999 ಸೀಟುಗಳು ಖಾಲಿ ಉಳಿದಿವೆ!

ಖಾಸಗಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಸೀಟು ಪಡೆಯಲು ಸಾಲು ನಿಲ್ಲಬೇಕಾಗುತ್ತದೆ. ಅದರಲ್ಲೂ ಎಂಬಿಎ ಹಾಗೂ ಎಂಸಿಎ ಕೋರ್ಸ್‌ಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಗುವುದೇ ಕಷ್ಟ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗಿಂತ ದುಪ್ಪಟ್ಟು ಶುಲ್ಕವಾದರೂ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳ ಮೊರೆ ಹೋಗುವುದು ಅನಿರ್ವಾಯ. ಇದಕ್ಕೆ ಕಾರಣ ವಿಶ್ವವಿದ್ಯಾಲಯಗಳಲ್ಲಿ ಜಾತಿ ರಾಜಕೀಯ, ಶಿಕ್ಷಣದ ಕಳಪೆ ಗುಣಮಟ್ಟ ಹಾಗೂ ವಿಭಾಗಗಳಲ್ಲಿನ ಮೂಲಭೂತ ಸೌಕರ್ಯ ಕೊರತೆ.
 
ಕಳೆದ ತಿಂಗಳು ನಡೆದ ಎಂಬಿಎ ಹಾಗೂ ಎಂಸಿಎ ಕೌನ್ಸೆಲಿಂಗ್‌ಗೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳ 2311 ಸೀಟುಗಳಿದ್ದವು. ಆದರೆ ಬೆಂಗಳೂರು, ಮೈಸೂರು ಹಾಗೂ ಧಾರವಾಡ ವಿವಿ ಹೊರತುಪಡಿಸಿ ಉಳಿದೆಡೆ ಭಾರೀ ಸಂಖ್ಯೆಯ ಸೀಟುಗಳು ಖಾಲಿ ಉಳಿದಿವೆ. ರಾಜ್ಯಕ್ಕೊಂದೇ ಇರುವ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಎಂಬಿಎ ಕೋರ್ಸ್‌ಗೆ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಎಷ್ಟೆಷ್ಟು ಸೀಟು ಖಾಲಿ?
ಎಂಬಿಎ
ದಾವಣಗೆರೆ ವಿವಿ 55
ಕರ್ನಾಟಕ ಮಹಿಳಾ ವಿವಿ, ಬಿಜಾಪುರ 59
ಕುವೆಂಪು ವಿವಿ 58
ವಿಟಿಯು, ಚಿಕ್ಕಬಳ್ಳಾಪುರ ಸ್ನಾತಕೋತ್ತರ ಕೇಂದ್ರ 110
ವಿಟಿಯು, ಬೆಳಗಾವಿ 55
ವಿಟಿಯು ಗುಲ್ಬರ್ಗ ವಿಭಾಗೀಯ ಕೇಂದ್ರ 53
ದಾವಣಗೆರೆ ವಿಟಿಯು 69
ಕರ್ನಾಟಕ ವಿವಿ, ಗದಗ ಸ್ನಾತಕೋತ್ತರ ಕೇಂದ್ರ 48
ಎಂಸಿಎ
ಕುವೆಂಪು ವಿವಿ 23
ರಾಣಿ ಚೆನ್ನಮ್ಮ ವಿವಿ 20
ವಿಟಿಯು, ಚಿಕ್ಕಬಳ್ಳಾಪುರ ಸ್ನಾತಕೋತ್ತರ ಕೇಂದ್ರ 98
ವಿಟಿಯು, ಬೆಳಗಾವಿ 59
ಕರ್ನಾಟಕ ಮಹಿಳಾ ವಿವಿ, ಬಿಜಾಪುರ 58
ಮಂಗಳೂರು ವಿವಿ 46

ವಿವಿ ಕಾಲೇಜು ಅಥವಾ ವಿಭಾಗಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರುವುದಿಲ್ಲ. ವಿದ್ಯಾರ್ಥಿಗಳ ಕ್ಯಾಂಪಸ್ ಆಯ್ಕೆಗೆ ವಿವಿ ಆಡಳಿತ ಮಂಡಳಿ ಪ್ರಯತ್ನ ಮಾಡುವುದಿಲ್ಲ. ಇದರಿಂದ ಖಾಸಗಿ ಕಾಲೇಜು ಆಯ್ಕೆ ಮಾಡುವುದು ಅನಿವಾರ್ಯ.
ವಿಶ್ವಾಸ್ ಕುಮಾರ್, ಎಂಸಿಎ ವಿದ್ಯಾರ್ಥಿ


-ರಾಜೀವ ಹೆಗೆಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.