ಪ್ರಧಾನ ಸುದ್ದಿ

ಪ್ರವಾಸ ಹೋದ ಶಾಸಕರ ವಾಪಸ್ ಕರೆಸಲ್ಲ: ಸಿಎಂ

ಪ್ರವಾಸ ಹೋದ ಶಾಸಕರ ವಾಪಸ್ ಕರೆಸಲ್ಲ: ಸಿಎಂ
Published On :

ಬೆಂಗಳೂರು: ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಂಬುದು ಗೊತ್ತು. ಆದರೆ ಶಾಸಕರು ನನ್ನ ಒಪ್ಪಿಗೆ ಪಡೆದು ಯುರೋಪ್ ಪ್ರವಾಸಕ್ಕೆ ಹೋಗಿಲ್ಲ. ಹೀಗಾಗಿ ನಾನು ಅವರನ್ನು ವಾಪಸ್ ಕರೆಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅತಿವೃಷ್ಟಿ ಪೀಡಿತ ಪ್ರದೇಶದ ಶಾಸಕರು ಯುರೋಪ್ ಪ್ರವಾಸ ತೆರಳಿರುವ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಅವರು, ನನಗೂ ಅದಕ್ಕೂ ಸಂಬಂಧಿವಿಲ್ಲ. ಅವರು, ವಿದೇಶ ಪ್ರವಾಸಕ್ಕೆ ಹೋದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ. ಮಳೆಯಿಂದ ತೊಂದರೆಗೊಳಗಾದ ಪ್ರದೇಶದ ಶಾಸಕರು ಪ್ರವಾಸಕ್ಕೆ ಹೋಗಿರಬಹುದು. ಅವರೇನು ನನ್ನ ಒಪ್ಪಿಗೆ ಪಡೆದಿಲ್ಲ. ಎಲ್ಲದಕ್ಕೂ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯವೇ ಎನ್ನುವ ಮೂಲಕ ಶಾಸಕರ ಪ್ರವಾಸವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಶಾಸಕರ ಯುರೋಪ್ ಪ್ರವಾಸಕ್ಕೆ ನಾನು ಪ್ರಯೋಜಕ್ವವಹಿಸಿಲ್ಲ. ಅವರು ಸ್ವಂತ ಖರ್ಚಿನಲ್ಲಿ ಹೋಗಿದ್ದರೆ ನಾನೇನು ಮಾಡಲು ಸಾಧ್ಯ? ಮಳೆಯಿಂದ ತೊಂದರೆಗೊಳಗಾದ ಜಿಲ್ಲೆಯ ಶಾಸಕರು ಹೋಗಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಚಿವರು ಏನನ್ನುತ್ತಾರೆ?

ಶಾಸಕರು ಸ್ವಂತ ಖರ್ಚಿನಲ್ಲಿ ಪ್ರವಾಸ ಹೋಗಿದ್ದಾರೆ. ಇವತ್ತಿನ ಪರಿಸ್ಥಿತಿಗೂ ಪ್ರವಾಸಕ್ಕೂ ಜೋಡಣೆ ಮಾಡುವುದು ಸರಿಯಲ್ಲ. ಕೆಲವರು ಹೋದ ನಂತರ ಮಳೆಯಾಗಿದೆ. ಇನ್ನು ಕೆಲವರು ಮಳೆಯಾದ ಮೇಲೆ ಹೋಗಿದ್ದಾರೆ.
- ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ

ಶಾಸಕರು ಈ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ತೆರಳಿರುವುದು ವೈಯಕ್ತಿಕವಾಗಿ ನನಗೆ ಬೇಸರ ಮೂಡಿಸಿದೆ. ಅದರಲ್ಲೂ ಆ ಭಾಗದ ಶಾಸಕರು ಯುರೋಪ್‌ಗೆ ತೆರಳಬಾರದಿತ್ತು. ಮಾನವೀಯ ದೃಷ್ಟಿಯಿಂದ ಯೋಚಿಸಬೇಕು.
- ಶ್ರೀನಿವಾಸ್ ಪ್ರಸಾದ್, ಕಂದಾಯ ಸಚಿವ

ಕೆಲವರು ಈಗಾಗಲೇ ಅಕ್ಕ ಸಮ್ಮೇಳನಕ್ಕೆ ಹೋಗಿದ್ದಾರೆ. ಹೊಸದಾಗಿ ಹೋಗಿರುವವರ ಬಗ್ಗೆ ನನಗೇನು ಗೊತ್ತಿಲ್ಲ. ಮಳೆ ಬಂದಿದೆ ಎಂದು ನಾವು ಯಾವುದೇ ಕೆಲಸವನ್ನು ನಿಲ್ಲಿಸಿಲ್ಲ. ಸಚಿವರಿಗೆ ಉಸ್ತುವಾರಿ ನೀಡಿದ್ದೇವೆ. ಪರಿಹಾರ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ.
- ಡಿ.ಕೆ. ಶಿವಕುಮಾರ್, ಇಂಧನ ಸಚಿವ

ಎಲ್ಲರೂ ತಮ್ಮ ಕರ್ತವ್ಯವನ್ನು ನಿಭಾಯಿಸಿ ಹೋಗಿದ್ದರೆ ಅಭ್ಯಂತರವಿಲ್ಲ. ಆದರೆ ಈಗ ಹೋದವರನ್ನು ವಾಪಸ್ ಕರೆಸುವುದು ಸಾಧ್ಯವಿಲ್ಲ. ಮುಂದೆ ಇಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಿಬೇಕು.
- ಎಚ್. ಆಂಜನೇಯ, ಸಮಾಜ ಕಲ್ಯಾಣ ಸಚಿವ

ಸರ್ಕಾರದ ಕಡೆಯಿಂದಾಗಲಿ, ನಮ್ಮ ಇಲಾಖೆ ಕಡೆಯಿಂದಲಾಗಲಿ ಪ್ರವಾಸ ಆಯೋಜಿಸಿಲ್ಲ. ಶಾಸಕರು ಸ್ವಂತ ಖರ್ಚಿನಲ್ಲಿ ಹೋದರೆ ತಪ್ಪೇನು ಇಲ್ಲ. ಶಾಸಕರನ್ನು ಕೆಟ್ಟವರಂತೆ ಬಿಂಬಿಸುವುದು ಸೂಕ್ತವಲ್ಲ.
- ಎಚ್. ಎಸ್. ಮಹಾದೇವಪ್ರಸಾದ್, ಸಹಕಾರಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.