ಮಾನವನ ಕಲ್ಪನೆ ಮೀರಿದ ಸಾಧನೆ: ಮೋದಿ

ಬೆಂಗಳೂರು: ಮಂಗಳನ ಕಕ್ಷೆ ತಲುಪಿದ 'ಮಾಮ್' ನೌಕೆ ಯಶಸ್ವಿಯಾಗುವುದರ ಮೂಲಕ ಮಾನವನ ಕಲ್ಪನೆ ಮೀರಿ ಸಾಧನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮಂಗಳಯಾನ ಯಶಸ್ವಿಗೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ, 'ಮಾಮ್' ಎಂದಿಗೂ ವಿಫಲವಾಗಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ 7.52 ಸುಮಾರಿಗೆ 'ಮಾಮ್' ನೌಕೆ ಮಂಗಳನ ಕಕ್ಷೆ ಸೇರಿದ್ದು, ಪ್ರಧಾನಿ ಮೋದಿ ಯಶಸ್ವಿ ಸಾಧನೆಗೆ ಅಭಿನಂದಿಸಿದ್ದಾರೆ.
ನೌಕೆಗೆ ಚಿಕ್ಕದಾಗಿ 'ಮಾಮ್' ಎಂದು ಹೆಸರಿಡಲಾಗಿತ್ತು. 'ಮಾಮ್' ಎಂದಿಗೂ ವಿಫಲವಾಗಲ್ಲ ಎಂಬ ಭರವಸೆ ಇತ್ತು. ಇಂದು ಭಾರತ ಮಹತ್ತರ ಸಾಧನೆ ಮಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಇಂತಹ ಸಾಧನೆ ಬಹಳ ಸುಲಭವಾಗಿದೆ. ಆದರೆ ಇಂತಹ ಸಾಧನೆ ಮಾಡುವಲ್ಲಿ, ಪ್ರಪಂಚದ 4ನೇ ದೇಶ ಭಾರತವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ನಮ್ಮ ವಿಜ್ಞಾನಿಗಳು ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಯಶಸ್ಸಿಗೆ ವಿಜ್ಞಾನಿಗಳಿಗೆ ಹಾಗೂ ಭಾರತೀಯರಿಗೆ ಅಭಿನಂದಿಸುತ್ತೇನೆ. ಮೊದಲ ಯತ್ನದಲ್ಲೇ ಯಶಸ್ಸು ಸಾಧಿಸಿದ ರಾಷ್ಟ್ರ ಭಾರತ.
ನಾವು ಈ ಸಾಧನೆಯನ್ನು ಒಂದು ಬಾಲಿವುಡ್ ಚಿತ್ರಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾಡಿದ್ದೇವೆ. ಮಾನವನ ಕಲ್ಪನೆಗೂ ಮೀರಿ ನಾವು ಮುಂದೆ ಹೋಗಿದ್ದೇವೆ.
ಮಂಗಳಯಾನ ನಿಜಕ್ಕೂ ಒಂದು ಸಾಧನೆ ಎಂದು ಮೋದಿ ಹೇಳಿದ್ದಾರೆ.
ನೌಕ ನಿರ್ಮಾಣ ಅಭೂತಪೂರ್ವಾಗಿದೆ. ಇಸ್ರೋಗೆ ಸಾಧ್ಯವಾಗದನ್ನ ಸಾಧ್ಯವಾಗಿಸುವುದು ಗೊತ್ತು. ಅಸಾಧ್ಯವಾದುದನ್ನು ಸಾಧಿಸುವುದು ಅಭ್ಯಾಸವಾಗಿದೆ. ನಮ್ಮ ದೇಶದ ಈ ಸಾಧನೆ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಿದೆ ಎಂದ ಅವರು, ಪ್ರತಿಯೊಬ್ಬರು ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳಬೇಕು, ಹಾಗಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕರೆ ನೀಡಿದ್ದಾರೆ.
ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆಯ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


