ನೇಪಾಳ ಭೂಕಂಪ: ಸಾವಿನ ಸಂಖ್ಯೆ 3218ಕ್ಕೆ ಏರಿಕೆ

ಕಣ್ಣು ಹಾಯಿಸದಲ್ಲೆಲ್ಲಾ ಬಿಳಿ ಬಟ್ಟೆ ಮುಚ್ಚಿದ ಮೃತದೇಹಗಳು, ಕುಸಿದು ಬಿದ್ದಿರುವ ಕಟ್ಟಡಗಳು, ಗಾಯಗೊಂಡವರ ಆಕ್ರಂದನ, ತಮ್ಮವರು ಬದುಕಿರಬಹುದೇ...
ಭೂಕಂಪದಿಂದಾಗಿ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ
ಭೂಕಂಪದಿಂದಾಗಿ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ
Updated on: 

ನವದೆಹಲಿ: ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳ ಈಗ ಅಕ್ಷರಶಃ ರುದ್ರಭೂಮಿ...

ಕಣ್ಣು ಹಾಯಿಸದಲ್ಲೆಲ್ಲಾ ಬಿಳಿ ಬಟ್ಟೆ ಮುಚ್ಚಿದ ಮೃತದೇಹಗಳು, ಕುಸಿದು ಬಿದ್ದಿರುವ ಕಟ್ಟಡಗಳು, ಗಾಯಗೊಂಡವರ ಆಕ್ರಂದನ, ತಮ್ಮವರು ಬದುಕಿರಬಹುದೇ ಎಂಬ ನಿರೀಕ್ಷೆಯಲ್ಲಿರುವ ಕಣ್ಣುಗಳು, ಅವಶೇಷಗಳ ಕೊರೆಯುವವ ಕೈಗಳು ಕಾಣುತ್ತಿವೆ...

ಭೀರಕರ ದುರಂತದ ಬಳಿಕ ಗಾಯಕ್ಕೆ ಉಪ್ಪು ಸವರಿದಂತೆ ಅಲ್ಲಿ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿದೆ. ಶನಿವಾರ ಸಂಭವಿಸಿದ ಮಹಾಭೂಕಂಪದ ನಂತರ ಭಾನುವಾರ ಮತ್ತೆ ಮೂರು ಪ್ರಬಲ ಕಂಪನಗಳು ಸಂಭವಿಸಿದೆ.

ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 3218ಕ್ಕೆ ಏರಿಕೆಯಾಗಿದೆ.

5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಡಿ ಸಿಲುಕಿದವರೆಷ್ಟೆಂದು ಲೆಕ್ಕಕ್ಕೇ ಸಿಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com