ಥಾನೆಯಲ್ಲಿ ಕಟ್ಟಡ ಕುಸಿತ: ೧೧ ಸಾವು; ೭ ಜನರಿಗೆ ಗಾಯ

ಮಹಾರಾಷ್ಟ್ರದ ಥಾನೆ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಕಟ್ಟದವೊಂದು ಮಂಗಳವಾರ ಕುಸಿದು ಕನಿಷ್ಠ ೧೧ ಜನ ಮೃತಪಟ್ಟು, ಏಳು ಜನ ಗಾಯಗೊಂಡಿದ್ದಾರೆ.
ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ವಿಪತ್ತು ರಕ್ಷಾಣಾ ದಳ
ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ವಿಪತ್ತು ರಕ್ಷಾಣಾ ದಳ
Updated on: 

ಥಾನೆ: ಮಹಾರಾಷ್ಟ್ರದ ಥಾನೆ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಕಟ್ಟದವೊಂದು ಮಂಗಳವಾರ ಕುಸಿದು ಕನಿಷ್ಠ ೧೧ ಜನ ಮೃತಪಟ್ಟು, ಏಳು ಜನ ಗಾಯಗೊಂಡಿದ್ದಾರೆ.

ಕಟ್ಟಡದ ಅವಶೇಷದ ಕೆಳಗೆ ಹಲವಾರು ಜನ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ರಕ್ಷಣೆ ಕಾರ್ಯಾಚರಣೆಗಾಗಿ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ರಕ್ಷಾಣಾ ದಳಗಳು ಧಾವಿಸಿವೆ.

ಥಾನೆಯ ಡಿ ಕ್ಯಾಬಿನ್ ಪ್ರದೇಶದ ಕೃಷ್ಣ ನಿವಾಸ ಕಟ್ಟಡ ಕುಸಿದು ೧೦ ಜನ ಸಾವನ್ನಪ್ಪಿ ಏಳಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ರಕ್ಷಾಣಾ ದಳಗಳು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ. ಈ ಹಿಂದೆಯೇ ಈ ಕಟ್ಟಡ ಅಪಾಯದಂಚಿನಲ್ಲಿದೆ ಎಂದು ಅಲ್ಲಿನ ನಿವಾಸಿಗಳು ಸ್ಥಳಾಂತರವಾಗುವಂತೆ ಸೂಚಿಸಿ ಥಾನೆ ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು.

ಈ ನೋಟಿಸ್ ನಂತರ ಈ ಕಟ್ಟಡದಿಂದ ಕೆಲವರು ಹೊರಬಂದಿದ್ದರು ಆದರೆ ಕೆಲವರು ಅಲ್ಲಿಯೇ ವಾಸಿಸಲು ಮುಂದುವರೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com