

ಮಸ್ದಾರ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸದ ಕೊನೆಯ ದಿನವಾದ ಸೋಮವಾರ ಇಲ್ಲಿನ ದುಬೈ ಕ್ರಿಕೆಟ್ ಸ್ಟೇಡಿಯಂ ಮತ್ತೊಂದು ಮಾ್ಯಡಿಸನ್ ಸ್ಕ್ವೇರ್ ಆಗಿ ಪರಿವರ್ತನೆಗೊಂಡಿತು.
ಪ್ರಧಾನಿ ಮೋದಿ ಅವರ ಭಾಷಣ ಕೇಳಲೆಂದು 50 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರು ಸ್ಟೇಡಿಯಂನತ್ತ ಹರಿದುಬಂದಿದ್ದರು. ಪ್ರಧಾನಿ ಸ್ಟೇಡಿಯಂನೊಳಕ್ಕೆ ಆಗಮಿಸುತ್ತಿದ್ದಂತೆ `ಮರ್‍ಹಬಾ ಮೋದಿ'- (ಮೋದಿಯವರಿಗೆ ಸ್ವಾಗತ) ಎಂಬ ಘೋಷಣೆಗಳೇ ಕೇಳಿಬಂದವು.
ಮೊದಲು ಭಾರತದ ಪ್ರತಿಯೊಂದು ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಪ್ರಧಾನಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಪಕ್ಷಗಳ ವಿರುದ್ಧ ದಾಳಿ: ಪ್ರಧಾನಿ ಮತ್ತೊಮ್ಮೆ ವಿದೇಶಿ ನೆಲದಲ್ಲಿ ಭಾರತದ ಹಿಂದಿನ ಸರ್ಕಾರಗಳನ್ನು ಟೀಕಿಸುವ ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾ- ಗಿ-ದ್ದಾರೆ. ``ನನ್ನ ಸರ್ಕಾರ ಹಿಂದಿನ ತಲೆಮಾರಿನಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಿಂದಿನ ಸರ್ಕಾರದ ಸ್ಥಿರ ನಿರ್ಧಾರ ಕೈಗೊಳ್ಳಲಾಗದ ಪ್ರವೃತ್ತಿ ಮತ್ತು ಆಲಸ್ಯದಿಂದಾಗಿ ನಿಂತು ಹೋಗಿರುವ ಯೋಜನೆಗಳನ್ನು ಮತ್ತೆ ಆರಂಭಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ'' ಎಂಬ ಮೋದಿ ಹೇಳಿಕೆಯಿಂದ ಕಾಂಗ್ರೆಸ್ ಕೆಂಡಾಮಂಡಲವಾಗಿ ದೆ. ``ವಿದೇಶಿ ನೆಲದಲ್ಲೂ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಹೇಳಿಕೆ ನೀಡಿರುವುದು ಅಸಹ್ಯಕರ. ಇದು ಭಾರತಕ್ಕೆ ದೊಡ್ಡ ಮುಜುಗರ'' ಎಂದಿದೆ.
ಸ್ವಯಂಚಾಲಿತ ಕಾರಲ್ಲಿ ಪ್ರಯಾಣ: ಸೋಮವಾರ ಇಂಗಾಲ ಮುಕ್ತ ಸ್ಮಾರ್ಟ್ ಸಿಟಿ ಮಸ್ದಾರ್‍ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಖಾಸಗಿ ಕ್ಷಿಪ್ರ ಸಾರಿಗೆಯಾದ ಸ್ವಯಂಚಾಲಿತ ಕಾರಿನಲ್ಲಿ ಪ್ರಯಾಣಿಸಿ- ದರು. ಈ ಕಾರು ಸೌರಶಕ್ತಿಚಾಲಿತ ಲೀಥಿಯಂ ಬ್ಯಾಟರಿ ಮೂಲಕ ಸಂಚರಿಸುತ್ತದೆ. ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಭಾರತಕ್ಕೆ ಯುಎಇ ಬೆಂಬಲ ಸೂಚಿಸಿದೆ.
ಮೋದಿ ಭಾಷಣದ ತುಣುಕುಗಳು