ಆಂಧ್ರದಲ್ಲಿ ಇಬ್ಬರು ಅಪ್ರಾಪ್ತರಿಂದ ಮೂರು ವರ್ಷದ ಬಾಲಿಕಿ ರೇಪ್

ಆಂಧ್ರಪ್ರದೇಶದ ಇಂಗಲಪಾಳ್ಯ ಹಳ್ಳಿಯಲ್ಲಿ ಮೂರು ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ಬಾಲಕರು ರೇಪ್ ಮಾಡಿರುವ ಘಟನೆ ನಡೆದಿದೆ ಎಂದು ಪೋಲಿಸರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಆಂಧ್ರಪ್ರದೇಶದ ಇಂಗಲಪಾಳ್ಯ ಹಳ್ಳಿಯಲ್ಲಿ ಮೂರು ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ಬಾಲಕರು ರೇಪ್ ಮಾಡಿರುವ ಘಟನೆ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಆಗಸ್ಟ್ ೧೮ರಂದು ಸುಮಾರು ೧೪ ವರ್ಷದ ಇಬ್ಬರು ಬಾಲಕರು, ದತ್ತಿರೇಜೇರು ಮಂಡಲದ ಗ್ರಾಮದ ಮನೆಯೊಂದರಿಂದ ಮೂರೂ ವರ್ಷದ ಬಾಲಕಿಯನ್ನು ಹೊಲಕ್ಕೆ ಕರೆದೊಯ್ದು ರೇಪ್ ಮಾಡಿದ್ದಾರೆ ಎಂದು ಗಜಪತಿನಗರದ ಸರ್ಕಲ್ ಇನ್ಸ್ಪೆಕ್ಟರ್ ವಿಜಯಾನಂದ್ ತಿಳಿಸಿದ್ದಾರೆ.

ಬಾಲಕಿಯ ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ, ಆರೋಪಿಸಲಾಗಿರುವ ಈ ದೌರ್ಜನ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯದ ಬಗ್ಗೆ ಬಾಲಕಿಯ ತಾಯಿ, ಬಾಲಕರ ಪೋಷಕರನ್ನು ಪ್ರಶ್ನಿಸಿದಾಗ ಅವರು ತಾಯಿಯನ್ನು ಥಳಿಸಿದ್ದಾರೆ. ಆಗ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪಿ ಒ ಸಿ ಎಸ್ ಒ) ಅಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಕುರಿತು ತನಿಖೆ ಪ್ರಗತಿಯಲ್ಲಿದ್ದು ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com