ಬಿಬಿಎಂಪಿ ಚುನಾವಣೆ: ಮಧ್ಯಾಹ್ನ 1.30ರವರೆಗೆ ಶೇ.21ರಷ್ಟು ಮತದಾನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು,..
ಬಿ.ಕೆ.ಹರಿಪ್ರಸಾದ್ - ಸುರೇಶ್ ಕುಮಾರ್ ಹಾಗೂ ಕುಟುಂಬ
ಬಿ.ಕೆ.ಹರಿಪ್ರಸಾದ್ - ಸುರೇಶ್ ಕುಮಾರ್ ಹಾಗೂ ಕುಟುಂಬ
Updated on: 

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಶನಿವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 1.30ರವರೆಗೆ ಶೇ.21.ರಷ್ಟು ಮತದಾನವಾಗಿದೆ.

ಯಲಹಂಕ ಉಪನಗರ ವಾರ್ಡ್ ಬಳಿ ಬಿಜೆಪಿ ಶಾಸಕ ವಿಶ್ವನಾಥ್ ಮತದಾರರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹಾಗೂ ಕೆಲವು ಕಡೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಬಿಬಿಎಂಪಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದ್ದು, ಇಂದು ಮಧ್ಯಾಹ್ನ 1.30ರವರೆಗೆ ಶೇ.21.ರಷ್ಟು ಮತದಾನವಾಗಿದೆ.

ಶಾಸಕರ ಪತ್ನಿ, ಪುತ್ರ, ಮಾಜಿ ಮೇಯರ್, ಹಾಗೂ ಮಾಜಿ ಸದಸ್ಯರೂ ಸ್ಪರ್ಧಿಸಿರುವ ಬಿಬಿಎಂಪಿಯ 197 ವಾರ್ಡ್‍ಗಳಿಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೃಹತ್ ಬೆಂಗಳೂರಿನಲ್ಲಿ 73,88,256 ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷ ಹಾಗೂ  ಪಕ್ಷೇತರರೂ ಸೇರಿದಂತೆ 1,121 ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ.

ಶೇ.60ರ ಮತದಾನದ ಗುರಿ
ಚುನಾವಣೆ ಮುಂದೂಡಿಕೆ ಸರ್ಕಸ್‍ಗಳ  ನಡುವೆಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿವಿಧ ಹಂತದಲ್ಲಿ ಕಸರತ್ತು ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ತಕ್ಕಂತೆ ರಾಜ್ಯ ಚುನಾವಣಾ ಆಯೋಗ ಕೂಡ  ಮುಂದೂಡಿಕೆ ಗೊಂದಲದ ನಡುವೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಅಷ್ಟೇ ಅಲ್ಲ. ಪ್ರತಿ ಚುನಾವಣೆಯಲ್ಲೂ ಶೇ.46 ಮೀರದ ಮತದಾನ ಪ್ರಮಾಣವನ್ನು ಈ ಬಾರಿ ಹೇಗಾದರೂ ಮಾಡಿ ಶೇ. 60ಕ್ಕೆ ಮುಟ್ಟಿಸಲು ಸಕಲ ಪ್ರಯತ್ನ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com