ತಮಿಳುನಾಡು ಸರ್ಕಾರ ನೆರವು ನಿರಾಕರಿಸಿಲ್ಲ: ಮುಖ್ಯ ಕಾರ್ಯದರ್ಶಿ ಕೌಶಿಕ್

ಪ್ರವಾಹ ಪೀಡೀತ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ ನೀಡಿದ್ದ ೫ ಕೋಟಿ ಪರಿಹಾರವನ್ನು ಸೇರಿದಂತೆ ಉಳಿದ ರಾಜ್ಯಗಳ ನೆರವನ್ನು ಎಐಡಿಎಂಕೆ ಸರ್ಕಾರ
ಪ್ರವಾಹ ಪೀಡೀತ ಚೆನ್ನೈನ ಒಂದು ದೃಶ್ಯ
ಪ್ರವಾಹ ಪೀಡೀತ ಚೆನ್ನೈನ ಒಂದು ದೃಶ್ಯ
Updated on

ಬೆಂಗಳೂರು: ಪ್ರವಾಹ ಪೀಡೀತ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ ನೀಡಿದ್ದ ೫ ಕೋಟಿ ಪರಿಹಾರವನ್ನು ಸೇರಿದಂತೆ ಉಳಿದ ರಾಜ್ಯಗಳ ನೆರವನ್ನು ಎಐಡಿಎಂಕೆ ಸರ್ಕಾರ ನಿರಾಕರಿಸಿದೆ ಎಂಬ ವದಂತಿ ನೆನ್ನೆ ಹಬ್ಬಿತ್ತು. ಈ ವದಂತಿಯನ್ನು ಅಲ್ಲಗೆಳೆದಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್, ಈ ಸುದ್ದಿ ನಿಜವಲ್ಲ, ತಮಿಳುನಾಡು ಸರ್ಕಾರಕ್ಕೆ ನಾವು ಘೋಷಿಸಿದ ನೆರವು ನೀಡಲಿದ್ದೇವೆ ಎಂದಿದ್ದಾರೆ.

ತಮಿಳುನಾಡು ಸರ್ಕಾರಕ್ಕೆ ಸಿದ್ಧರಾಮಯ್ಯನವರು ೫ ಕೋಟಿ ನೆರವು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ನಮ್ಮ ನೆರವನ್ನು ಒಪ್ಪಿಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ನೆರವು ಪರಿಹಾರ ನೀಡಲಾಗುತ್ತದೆ ಎಂದು ಕೌಶಿಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com