ಜೇಟ್ಲಿ ರಾಜಿನಾಮೆಗೆ ಕಾಂಗ್ರೆಸ್, ಆಪ್ ಒತ್ತಾಯ

ಬುಧವಾರ ಸಂಸತ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿವಾದದ ಕೇಂದ್ರಬಿಂದುವಾದರು. ದೆಹಲಿಯ ಕ್ರಿಕೆಟ್...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 
ನವದೆಹಲಿ: ಬುಧವಾರ ಸಂಸತ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿವಾದದ ಕೇಂದ್ರಬಿಂದುವಾದರು. 
ದೆಹಲಿಯ ಕ್ರಿಕೆಟ್ ಸಂಸ್ಥೆ ಡಿಡಿಸಿಎಯಲ್ಲಿ 1999ರಿಂದ 2013ರ ಅವಧಿಯಲ್ಲಿ(ಜೇಟ್ಲಿ ಮುಖ್ಯಸ್ಥ ರಾಗಿದ್ದಾಗ) ನಡೆದಿದೆಯೆನ್ನಲಾದ ಭಾರಿ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ಜೇಟ್ಲಿ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಆಪ್ ಸದಸ್ಯರು ಒತ್ತಾಯಿಸಿದರು. 
ದೆಹಲಿ ಸರ್ಕಾರ ನೇಮಿಸಿದ್ದ ಸಮಿತಿ ಡಿಡಿಸಿಎಯಲ್ಲಿ ಅವ್ಯವಹಾರ ನಡೆದಿರುವುದಾಗಿ ವರದಿ ನೀಡಿದೆ. ಜೇಟ್ಲಿ ಅವರು ಸಚಿವರಾಗಿ ಇರುವವರೆಗೂ ನ್ಯಾಯಸಮ್ಮತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಆಪ್ ಹೇಳಿತು. ಜಂಟಿ ಸಂಸದೀಯ ಸಮಿತಿ ರಚಿಸಿ ಜೇಟ್ಲಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿತು. 
ಡಿಡಿಸಿಎ ಮುಖ್ಯಸ್ಥ ರಾಗಿದ್ದಾಗ ಜೇಟ್ಲಿ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ವತಃ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರೇ ದೂರು ನೀಡಿದ್ದರು ಎಂದೂ ಆಪ್ ತಿಳಿಸಿದೆ. ಏತನ್ಮಧ್ಯೆ, ಗುರುವಾರ ಡಿಡಿಸಿಎ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುತ್ತೇವೆ ಎಂದೂ ಆಪ್ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com