ಪ್ರಧಾನ ಸುದ್ದಿ

4 ದಿನ ಬ್ಯಾಂಕ್ ಇಲ್ಲ

ಈ ವಾರದಲ್ಲಿ ಬರುವ ಸರಣಿ ಸರ್ಕಾರಿ ರಜೆಗಳಿಂದಾಗಿ ಬ್ಯಾಂಕ್‍ಗಳೂ ಸತತ ನಾಲ್ಕು ದಿನ ಕಾರ್ಯ ನಿರ್ವಹಣೆ ನಿಲ್ಲಿಸಲಿವೆ...

4 ದಿನ ಬ್ಯಾಂಕ್ ಇಲ್ಲ
ಬ್ಯಾಂಕಿಂಗ್ ಸರ್ವಿಸ್
Published On :

ಬೆಂಗಳೂರು: ಈ ವಾರದಲ್ಲಿ ಬರುವ ಸರಣಿ ಸರ್ಕಾರಿ ರಜೆಗಳಿಂದಾಗಿ ಬ್ಯಾಂಕ್‍ಗಳೂ ಸತತ ನಾಲ್ಕು ದಿನ ಕಾರ್ಯ ನಿರ್ವಹಣೆ ನಿಲ್ಲಿಸಲಿವೆ.

ಡಿ.24 (ಗುರುವಾರ) ಈದ್ ಮಿಲಾದ್, ಡಿ.25 (ಶುಕ್ರವಾರ) ಕ್ರಿಸ್‍ಮಸ್, ಶನಿವಾರ (ನಾಲ್ಕನೇ ಶನಿವಾರ ಪೂರ್ಣ ರಜೆ), ನಂತರ ಎಂದಿನಂತೆ ಭಾನುವಾರ ರಜೆ ಇರುವುದರಿಂದ ಸತತವಾಗಿ 4  ದಿನ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಬ್ಯಾಂಕ್ ಗಳಿಗೆ ಸಿಕ್ಕ ನಾಲ್ಕು ದಿನಗಳ ರಜೆಯಿಂದಾಗಿ ಎಟಿಎಂಗಳಿಗೂ ಹಣದ ಕೊರತೆಯಾಗಿಲಿದೆ. ಹೀಗಾಗಿ ಎಟಿಎಂಗಳೂ ಕಾರ್ಯ ನಿರ್ವಹಿಸುವುದು ಅನುಮಾನ.

ಕೆಲವು ರಾಷ್ಟ್ರೀಕೃತ ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಅನುಕೂಲಕ್ಕಾಗಿ ಪ್ರಮುಖ ಎಟಿಎಂಗಳಿಗೆ ಹಣ ತುಂಬಲಿವೆ. ಹೀಗಾಗಿ ಬಹುತೇಕ ಬ್ಯಾಂಕಿಂಗ್ ವ್ಯವಹಾರ ನಾಲ್ಕು ದಿನಗಳ ಕಾಲ  ಸ್ತಬ್ಧವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.