

ಕೊಪ್ಪಳ: ಈ ವರ್ಷ ಲೇವಿ ಅಕ್ಕಿ ಸಂಗ್ರಹಿಸುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.
ಅಕ್ಕಿಯ ದರ ಆಕಾಶದೆತ್ತರಕ್ಕೆ ಏರುತ್ತಿರುವ ಸಂದರ್ಭದಲ್ಲಿ ಲೇವಿ ಸಂಗ್ರಹಿಸಿದರೆ ಹೇಗೆಂದು ಚಿಂತೆಗೀಡಾಗಿದ್ದ ಅಕ್ಕಿ ಮಿಲ್‍ಗಳ ಮಾಲೀಕರು ನಿರಾಳವಾಗಿದ್ದಾರೆ.
ಕೇಂದ್ರ ಸರ್ಕಾರವೇ ಲೇವಿ ನಿಗದಿ ಕೈಬಿಟ್ಟಿರುವುದರಿಂದ ರಾಜ್ಯದಲ್ಲಿ ಅದನ್ನು ಸಂಗ್ರಹಿಸುವುದಿಲ್ಲ. ಆದರೆ, ಬೆಂಬಲ ಬೆಲೆ ದರದಲ್ಲೇ ಪ್ರೋತ್ಸಾಹ ಧನವನ್ನೊಳಗೊಂಡು ಬತ್ತ ಖರೀದಿ ಮಾಡಲಾಗು ತ್ತದೆ ಎಂದು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ. ಬತ್ತ ಮತ್ತು ಅಕ್ಕಿಯ ದರ ಹೆಚ್ಚಳವಾಗುವ ನಿರೀಕ್ಷೆ ಇದೆ. ನೆರೆಯ ತಮಿಳುನಾಡು ಮತ್ತು ಆಂಧ್ರದಲ್ಲಿ ನೆರೆಗೆ ಬೆಳೆ ನಾಶವಾಗಿ ಅಕ್ಕಿಗೆ ಭಾರಿ ಭೇಡಿಕೆ ಬಂದಿದೆ. ಹೀಗಾಗಿ,ಲೇವಿ ನೀಡುವುದು ಅಸಾಧ್ಯ ಎಂದು ಮಿಲ್ ಮಾಲೀಕರು ಹೇಳಿದ್ದರು.
ಡಿ.29ರಂದು ಕೊಪ್ಪಳ ಸೇರಿ ವಿವಿಧೆಡೆ ನಡೆಯುವ ಮಿಲ್ ಮಾಲೀಕರ ಜತೆಗಿನ ಸಭೆ ಬತ್ತ ಖರೀದಿ ಕೇಂದ್ರ ಪ್ರಾರಂಭ ಮಾಡುವ ವಿಚಾರಕ್ಕೆ ಸೀಮಿತವಾಗಿದೆಯೇ ಹೊರತುಲೇವಿ ಸಂಗ್ರಹಕ್ಕಲ್ಲ ಎಂದು ತಿಳಿದು ಬಂದಿದೆ.