ಪ್ರಶಸ್ತಿ ಸಮಾರಂಭದಲ್ಲಿ ರಾಮ್-ಲೀನಾ ಕಿಸ್ಸಿಂಗ್!

ಹಿರಿಯ ವಕೀಲ ರಾಮ್‌ಜೇಠ್ಮಲಾನಿ ಅವರ 'ಮುತ್ತಿನ' ಕಥೆ ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ...
ರಾಮ್‌ಜೇಠ್ಮಲಾನಿ -ಲೀನಾ ಲಿಪ್ ಲಾಕ್
ರಾಮ್‌ಜೇಠ್ಮಲಾನಿ -ಲೀನಾ ಲಿಪ್ ಲಾಕ್
Updated on: 

ನವದೆಹಲಿ: ಹಿರಿಯ ವಕೀಲ ರಾಮ್‌ಜೇಠ್ಮಲಾನಿ ಅವರ ಮುತ್ತಿನ ಕಥೆ ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ.
ವಿಷ್ಯ ಏನಪ್ಪಾ ಅಂದ್ರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ಜೇಠ್ಮಲಾನಿ  ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್ ಅವರ ಪತ್ನಿ, ಖ್ಯಾತ ನಟಿ ಲೀನಾ ಚಂದ್ರಾವರ್ಕರ್ ಅವರಿಗೆ ಲಿಪ್ ಲಾಕ್ ಮಾಡಿದ್ದಾರೆ. ಈ ದೃಶ್ಯವನ್ನು ಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಸೆರೆ ಹಿಡಿದಿದ್ದು, ರಾಮ್-ಲೀನಾ ಕಿಸ್ಸಿಂಗ್ ಚಿತ್ರ ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ.

ಕಳೆದ ವರ್ಷ ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ ಜೇಠ್ಮಲಾನಿ ಸಾರ್ವಜನಿಕವಾಗಿ ಕಿಸ್ ಕೊಟ್ಟಿದ್ದು ಕೂಡಾ ವಿವಾದಕ್ಕೀಡಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com