ಆನ್‌ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ ಮೂವರು Gayಳೆಯರ ಮದುವೆ!

ಸಲಿಂಗ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಥಾಯ್‌ಲ್ಯಾಂಡ್‌ನಲ್ಲಿ ಅಪೂರ್ವವಾದ ಒಂದು ಸಲಿಂಗ ವಿವಾಹ ಸುದ್ದಿಯಾಗಿದೆ. ಮದುವೆ ಎಂಬುದು ಇಬ್ಬರು...
ಸಲಿಂಗ ವಿವಾಹವಾದ ಜೋಕ್, ಬೆಲ್ ಮತ್ತು ಆರ್ಟ್
ಸಲಿಂಗ ವಿವಾಹವಾದ ಜೋಕ್, ಬೆಲ್ ಮತ್ತು ಆರ್ಟ್

ಬ್ಯಾಂಕಾಕ್: ಸಲಿಂಗ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಥಾಯ್‌ಲ್ಯಾಂಡ್‌ನಲ್ಲಿ ಅಪೂರ್ವವಾದ ಒಂದು ಸಲಿಂಗ ವಿವಾಹ ಸುದ್ದಿಯಾಗಿದೆ. ಮದುವೆ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಯಾಕೆ ಆಗಬೇಕು? ಅಲ್ಲಿ ಮೂರು ಜನ ಇದ್ದರೆ ಏನಾಗುತ್ತೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮೂವರು ಸಲಿಂಗಕಾಮಿಗಳು ಒಟ್ಟಿಗೆ ಮದುವೆಯಾಗಿದ್ದಾರೆ. ಅಂದರೆ ಇವರದ್ದು ಮೂವರ ಸಂಸಾರ!

ಇಬ್ಬರು ಯುವಕರು ಪರಸ್ಪರ ಮದುವೆಯಾಗುವುದು ಇಲ್ಲಿ ಸಾಮಾನ್ಯ. ಆದರೆ ಇಬ್ಬರು ಯುವಕರು ಒಬ್ಬ ಯುವಕನ್ನು ಬಾಳ ಸಂಗಾತಿಯನ್ನಾಗಿಸುವುದಕ್ಕೆ ಇಲ್ಲಿ ಅನುಮತಿ ಇಲ್ಲದೇ ಇರುವ ಕಾರಣ ಇವರು ಗುಟ್ಟಾಗಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ಮದುವೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಜೋಕ್, ಬೆಲ್ ಮತ್ತು ಆರ್ಟ್ ಎಂಬ ಹೆಸರಿನ ಈ ಮೂರು ಸಲಿಂಗಕಾಮಿಗಳು  ಫೆಬ್ರವರಿ 15ರ ರಾತ್ರಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಿದ್ದಾರೆ.

ವಿವಾಹದ ಫೋಟೋವನ್ನು ಇವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಆ ಪೋಸ್ಟಿಗೆ 5 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಮತ್ತು ಸಾವಿರಾರು ಕಾಮೆಂಟ್‌ಗಳು ಸಿಕ್ಕಿವೆ.

ಇವರು ಫೇಸ್‌ಬುಕ್‌ಗೆ ಹಾಕಿದ ಫೋಟೋವೊಂದಕ್ಕೆ ನಾವು ಮೂವರು ಹೀಗೆ ಜತೆಯಾಗಿ ಹೀಗೆ ಕೈಹಿಡಿದುಕೊಂಡು ಜತೆಯಾಗಿಯೇ ಬದುಕು ಸಾಗಿಸುತ್ತೇವೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com