

ನವದೆಹಲಿ: ದೆಹಲಿಯಲ್ಲಿನ ಚಳಿಯಲ್ಲಿ ಚುನಾವಣೆಯ ಕಾವು ಏರುತ್ತಾ ಹೋಗುತ್ತಿದೆ. ಇದೀಗ ಸಿನಿಮಾನಟಿ- ರಾಜಕಾರಣಿ ಜಯಪ್ರದಾ ಬಿಜೆಪಿ ಸೇರಿ ದೆಹಲಿಯಲ್ಲಿ ಚುನಾವಣೆ ಎದುರಿಸಲಿದ್ದಾರೆ ಎನ್ನುವುದು ಸದ್ಯದ ಸುದ್ದಿ.
ಜಯಪ್ರದಾ ಅವರು ಬಿಜೆಪಿಗೆ ಸೇರಿದರೆ ಆಕೆ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ. ಜಯಪ್ರದಾ ಅವರು 2014ರಲ್ಲಿ ಬಿಜನೂರ್‌ನಲ್ಲಿ ರಾಷ್ಟ್ರೀಯ ಲೋಕದಳದ ಸೀಟಿನಲ್ಲಿ ಸ್ಪರ್ಧಿಸಿ ಸೋತಿದ್ದರು.
ಈ ಹಿಂದೆ ತೆಲುಗು ದೇಶಂ ಪಾರ್ಟಿ, ಸಮಾಜವಾದಿ ಪಾರ್ಟಿಯಲ್ಲಿದ್ದು ಅಲ್ಲಿಂದ ಆರ್‌ಎಲ್‌ಡಿ ಪಾರ್ಟಿಗೆ ಸೇರಿದ ಜಯ ಈಗ ಬಿಜೆಪಿಗೆ ಸೇರುತ್ತಿರುವುದು ಕುತೂಹಲವನ್ನುಂಟು ಮಾಡಿದೆ.