ಒಬಾಮ ಭೇಟಿಗೆ ಮುನ್ನ ನೆನಪುಗಳ ಸುರುಳಿ ಬಿಚ್ಚಿದ ರಾಷ್ಟ್ರಪತಿ

ನವದೆಹಲಿ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಳೇ ಫೋಟೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡುವ ಮೂಲಕ ನೆನಪಿನ ಸುರುಳಿ ಬಿಚ್ಚಿದ್ದಾರೆ.
ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ವಿದೇಶಿ ಅಧಿಕಾರಿಗಳ ಫೋಟೋಗಳನ್ನು ಪ್ರಣಬ್ ಟ್ವೀಟ್ ಮಾಡಿದ್ದಾರೆ.
ಇದೀಗ ಒಬಾಮಾ ಕೂಡಾ ಗಣರಾಜ್ಯೋತ್ಸ್ಸವ ಪರೇಡ್‌ಗೆ ಅತಿಥಿಯಾಗಿ ಬಂದವರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ ಒಬಾಮ.

1985ರಲ್ಲಿ ಅರ್ಜೆಂಟಿನಾದ ಅಧ್ಯಕ್ಷ ರೌಲ್ ಅಲ್‌ಫೋನ್‌ಸಿನ್ ಭೇಟಿ

1983 ರಲ್ಲಿ ನೈಜೀರಿಯಾ ಅಧ್ಯಕ್ಷ ಅಲ್‌ಹಾಜಿ ಸೇಹು ಉಸ್ಮಾನ್ ಅಲಿಯೂ ಶಾಗರಿ ಭೇಟಿ

1981ರಲ್ಲಿ ಮೆಕ್ಸಿಕೋ ಅಧ್ಯಕ್ಷ ಜೋಸ್ ಲೋಪೆಜ್ ಪೋರ್ಟಿಲ್ಲೋ ಭೇಟಿ

1980ರಲ್ಲಿ ಫ್ರಾನ್ಸ್ ಅಧ್ಯಕ್ಷ ವಲೆರಿ ಗಿಸ್‌ಕಾರ್ಡ್ ಡಿಏಸ್ಟೈಂಗ್ ಭೇಟಿ

1979ರಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೊಂ ಫ್ರೇಸರ್ ಭೇಟಿ

1978ರಲ್ಲಿ ಐರ್‌ಲ್ಯಾಂಡ್ ಅಧ್ಯಕ್ಷ ಪ್ಯಾಟ್ರಿಕ್ ಜೆ ಹಿಲ್ಲೆರಿ ಭೇಟಿ

1975ರಲ್ಲಿ ಜಾಂಬಿಯಾ ಅಧ್ಯಕ್ಷ ಕೆನ್ನಸ್ ಕೌಂದಾ ಭೇಟಿ

1974ರಲ್ಲಿ ಯುಗೋಸ್ಲಾವಿಯಾ ಅಧ್ಯಕ್ಷ ಜೋಸಿಪ್ ಬ್ರೋಜ್ ಟಿಟೋ ಭೇಟಿ

1972ರಲ್ಲಿ ಮಾರಿಶಸ್ ಪ್ರಧಾನಿ ಸರ್ ಎಸ್ ರಾಮ್‌ಗೂಲಂ ಭೇಟಿ

1971ರಲ್ಲಿ ತನ್‌ಜಾನಿಯಾ ಅಧ್ಯಕ್ಷ ಜೂಲಿಯಸ್ ನ್ಯೇರೇರ್ ಭೇಟಿ

1968ರಲ್ಲಿ ಯುಗೋಸ್ಲಾವಿಯಾ ಅಧ್ಯಕ್ಷ ಜೆಬಿ ಟಿಟೋ ಭೇಟಿ

1963ರಲ್ಲಿ ಕಂಬೋಡಿಯಾದ ರಾಜ ನೋರೋಡಂ ಸಿಹಾನೌಕ್ ಭೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


